ಸೀತಾರಾಂ ಯೆಚೂರಿಯನ್ನು ರಾಜ್ಯಸಭೆಗೆ ಕಳುಹಿಸಲು ಪಶ್ಚಿಮ ಬಂಗಾಳ ಸಿಪಿಎಂ ಆಗ್ರಹ

Update: 2017-05-24 11:02 GMT

ಕೊಲ್ಕತಾ,ಮೇ 24: ಸಿಪಿಎಂ ಪ್ರಧಾನಕಾರ್ಯದರ್ಶಿ ಸೀತಾರಾಂ ಯೆಚೂರಿಯನ್ನು ರಾಜ್ಯಸಭೆ ಟಿಕೇಟು ನೀಡಬೇಕೆಂದು ಸಿಪಿಎಂನ ಬಂಗಾಳ ಘಟಕ ಆಗ್ರಹಿಸಿದೆ. ಪಶ್ಚಿಮ ಬಂಗಾಳ ಘಟಕ ಯೆಚೂರಿಯ ರಾಜ್ಯ ಸಭಾ ಅಭ್ಯರ್ಥಿತನದ ಕುರಿತು ಪೊಲಿಟ್‌ಬ್ಯೂರೊಕ್ಕೆ ಪತ್ರ ಬರೆದಿದ್ದು ಅದು ಮುಂದಿನ ತಿಂಗಳು ದಿಲ್ಲಿಯಲ್ಲಿ ನಡೆಯುವ ಪೊಲಿಟ್ ಬ್ಯೂರೊ ಸಭೆಯಲ್ಲಿ ಚರ್ಚೆಗೆ ಬರಲಿದೆ. ರಾಜ್ಯಸಸಭೆಯಲ್ಲಿ ಯೆಚೂರಿಯಂತಹವರ ಉಪಸ್ಥಿತಿ ಇರುವುದು ಮುಖ್ಯವೆಂದು ಪತ್ರದಲ್ಲಿ ವಿವರಿಸಲಾಗಿದೆ.

ಸಿಪಿಎಂನ ನಿಯಮದಂತೆ ಎರಡು ಅವಧಿಗಿಂತ ಹೆಚ್ಚು ಬಾರಿ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸುವಂತಿಲ್ಲ. ಆದರೆ ಯಚೂರಿಗೆ ಎರಡು ಅವಧಿಯೆನ್ನುವ ನಿಯಮದಲ್ಲಿ ಸಡಿಲಿಕೆ ಮಾಡಬೇಕೆಂದು ಬಂಗಾಳ ಘಟಕ ಆಗ್ರಹಿಸಿದೆ.

 ರಾಜ್ಯಸಭಾ ಚುನಾವಣೆಯಲ್ಲಿಬೆಂಬಲ ಕೋರಿದರೆ ಯೆಚೂರಿಯನ್ನು ಬೆಂಬಲಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಬಂಗಾಳದಿಂದ ಕಾಂಗ್ರೆಸ್‌ನ ಬೆಂಬಲವಿಲ್ಲದೆ ರಾಜ್ಯಸಭೆಗೆ ಆಯ್ಕೆಯಾಗಲು ಸಾಧ್ಯವಿಲ್ಲ. ಆದರೆ ಪ್ರಕಾಶ್ ಕಾರಟ್ ನೇತೃತ್ವದ ಒಂದು ವಿಭಾಗ ಕಾಂಗ್ರೆಸ್‌ನ ಬೆಂಬಲ ಯಾಚಿಸುವುದು ಸರಿಯಲ್ಲ ಎನ್ನುವ ನಿಲುವನ್ನು ಹೊಂದಿದೆ ಮಾತ್ರವಲ್ಲ ಒಬ್ಬರಿಗೆ ಎರಡು ಅವಧಿಗಿಂತ ಹೆಚ್ಚು ಸಲ ರಾಜ್ಯಸಭೆಗೆ ಟಿಕೆಟು ನೀಡಬಾರದು ಎನ್ನುತ್ತಿದೆ. ಈಗಾಗಲೇ ಯಚೂರಿ ತಾನು ರಾಜ್ಯಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News