ನೇಪಾಳ ಪ್ರಧಾನಿ ‘ಪ್ರಚಂಡ’ ರಾಜೀನಾಮೆ

Update: 2017-05-24 14:44 GMT

ಕಠ್ಮಂಡು, ಮೇ 24: ಕಳೆದ ವರ್ಷ ನಡೆದ ಒಪ್ಪಂದಕ್ಕೆ ಅನುಸಾರವಾಗಿ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಬುಧವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮುಂದಿನ ಸರಕಾರವನ್ನು ರಚಿಸಲು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದುರ್ ದೇವುಬ ಅವರ ದಾರಿ ಸುಗಮವಾದಂತಾಗಿದೆ.

ರಾಜಕೀಯಕ್ಕೆ ಸೇರುವ ಮೊದಲು 62 ವರ್ಷದ ಪ್ರಚಂಡ ನೇಪಾಳದಲ್ಲಿ ನಡೆದ ದಶಕದ ಅವಧಿಯ ಬಂಡಾಯದ ನೇತೃತ್ವ ವಹಿಸಿದ್ದರು.

ಟಿವಿಯಲ್ಲಿ ಪ್ರಸಾರವಾಗಿ ಭಾಷಣದಲ್ಲಿ ಅವರು ತನ್ನ ರಾಜೀನಾಮೆಯನ್ನು ಘೋಷಿಸಿದರು. ಅವರು ತನ್ನ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿಗೆ ಸಲ್ಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News