ಭಾರತಕ್ಕೆ ಹಿಂದಿರುಗಲು ಉಝ್ಮೆಗೆ ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ
Update: 2017-05-24 20:17 IST
ಇಸ್ಲಾಮಾಬಾದ್, ಮೇ 24: ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನನ್ನು ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದ ಭಾರತೀಯ ಮಹಿಳೆಗೆ ಭಾರತಕ್ಕೆ ಹಿಂದಿರುಗಲು ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.
20 ವರ್ಷದ ಭಾರತೀಯ ಮಹಿಳೆ ಉಝ್ಮ ತನ್ನ ಗಂಡ ತಾಹಿರ್ ಅಲಿ ವಿರುದ್ಧ ಇಸ್ಲಾಮಾಬಾದ್‌ನ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ, ಆತ ತನಗೆ ಕಿರುಕುಳ ನೀಡುತ್ತಿದ್ದಾನೆ ಮತ್ತು ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದರು.
ತನ್ನನ್ನು ಆತ ಬಂದೂಕು ತೋರಿಸಿ ಬೆದರಿಸಿ ಮದುವೆಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
‘‘ನನ್ನ ವಲಸೆ ದಾಖಲೆಗಳನ್ನು ಆತ ಕಸಿದುಕೊಂಡಿದ್ದಾನೆ’’ ಎಂದು ಉಝ್ಮಾ ಆರೋಪಿಸಿದ್ದಾರೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.
ತನಗೆ ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಲು ಸಾಧ್ಯವಾಗುವವರೆಗೆ ಭಾರತೀಯ ಹೈಕಮಿಶನ್‌ನಿಂದ ಹೊರಬರುವುದಿಲ್ಲ ಎಂದು ಅವರು ಹೇಳಿದ್ದರು.