ಶತ್ರುವಿಗೆ ಸೂಕ್ತ ಉತ್ತರ: ಪಾಕ್ ವಾಯು ಪಡೆ ಮುಖ್ಯಸ್ಥ
Update: 2017-05-24 21:44 IST
ಇಸ್ಲಾಮಾಬಾದ್, ಮೇ 24: ‘ಶತ್ರು’ವಿನ ಯಾವುದೇ ದಾಳಿಗೆ ಅವರ ಮುಂದಿನ ತಲೆಮಾರುಗಳು ನೆನಪಿನಲ್ಲಿಡುವ ರೀತಿಯಲ್ಲಿ ತನ್ನ ಪಡೆಗಳು ಪ್ರತಿಕ್ರಿಯಿಸುವುದು ಎಂದು ಪಾಕಿಸ್ತಾನದ ವಾಯು ಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಶಲ್ ಸುಹೈಲ್ ಅಮನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಶತ್ರುವಿನ ಯಾವುದೇ ದುಸ್ಸಾಹಸಕ್ಕೆ ಪಾಕಿಸ್ತಾನವು ಸೂಕ್ತ ಪ್ರತಿಕ್ರಿಯೆ ನೀಡುವುದು ಎಂದು ಅಮನ್ ಹೇಳಿದರು. ಸ್ಕರ್ಡು ಎಂಬ ಸ್ಥಳದಲ್ಲಿರುವ ಕಾದ್ರಿ ವಾಯುನೆಲೆಗೆ ಭೇಟಿ ನೀಡಿದ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು ‘ರೇಡಿಯೊ ಪಾಕಿಸ್ತಾನ’ ವರದಿ ಮಾಡಿದೆ.