ಅಫ್ಘಾನ್‌ನಲ್ಲಿ ಅಸ್ಥಿರತೆ ಸೃಷ್ಟಿಸಲು ಪಾಕ್‌ನಿಂದ ಉಗ್ರರ ಬಳಕೆ: ಅಮೆರಿಕ ಗುಪ್ತಚರ ಅಧಿಕಾರಿ

Update: 2017-05-24 16:18 GMT

ವಾಶಿಂಗ್ಟನ್, ಮೇ 24: ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ ಹಾಗೂ ಅವರನ್ನು ಅಫ್ಘಾನಿಸ್ತಾನದಲ್ಲಿ ‘ಮೀಸಲು’ ಆಗಿ ಬಳಸುತ್ತಿದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆ.ಜ. ವಿನ್ಸೆಂಟ್ ಸ್ಟಿವರ್ಟ್ ಹೇಳಿದ್ದಾರೆ.

ಜಾಗತಿಕ ಬೆದರಿಕೆಗಳ ಕುರಿತ ಕಾಂಗ್ರೆಸ್ ವಿಚಾರಣೆಯ ವೇಳೆ ಅವರು, ಪ್ರಭಾವಿ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರಿಗೆ ಈ ಮಾಹಿತಿ ನೀಡಿದರು.

  ‘‘ಸುರಕ್ಷಿತ, ಸುಭದ್ರ, ಸ್ಥಿರ ಅಫ್ಘಾನಿಸ್ತಾನವನ್ನು ಪಾಕಿಸ್ತಾನ ಬಯಸುತ್ತದೆ. ಆದರೆ, ಅಲ್ಲಿ ಹೆಚ್ಚಿನ ಭಾರತೀಯ ಪ್ರಭಾವ ಇರುವುದನ್ನು ಅದು ಸಹಿಸುವುದಿಲ್ಲ’’ ಎಂದು ವಿನ್ಸೆಂಟ್ ತಿಳಿಸಿದರು.

‘‘ಅವರು ಎಲ್ಲ ಸವಾಲುಗಳನ್ನು ‘ಪಾಕಿಸ್ತಾನಕ್ಕೆ ಭಾರತದಿಂದ ಬೆದರಿಕೆ’ ಎಂಬ ಗಾಜಿನಿಂದ ನೋಡುತ್ತಾರೆ’’ ಎಂದರು.

‘‘ಹಾಗಾಗಿ, ಅವರು (ಪಾಕಿಸ್ತಾನ) ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸಿಕೊಂಡು ಬರುತ್ತಾರೆ. ಅಫ್ಘಾನಿಸ್ತಾನ ಭಾರತದೆಡೆಗೆ ವಾಲಿದಾಗ, ಸ್ಥಿರ ಮತ್ತು ಸುಭದ್ರ ಅಫ್ಘಾನಿಸ್ತಾನದ ಕಲ್ಪನೆಯನು ಅವರು ಬೆಂಬಲಿಸುವುದಿಲ್ಲ. ಇಂಥ ಅಫ್ಘಾನಿಸ್ತಾನ ಪಾಕಿಸ್ತಾನದ ಹಿತಾಸಕ್ತಿಗೆ ಬೆದರಿಕೆ ಎಂಬುದಾಗಿ ಅವರು ಪರಿಗಣಿಸುತ್ತಾರೆ’’ ಎಂದು ಸೆನೆಟ್ ಮುಂದೆ ಸಾಕ್ಷ ನುಡಿದ ಸ್ಟಿವರ್ಟ್ ನುಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News