ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಯುರೋಪ್ ಲೀಗ್ ಟ್ರೋಫಿ

Update: 2017-05-25 17:31 GMT

ಸ್ಟಾಕ್‌ಹೋಮ್, ಮೇ 25: ಯುರೋಪ್ ಲೀಗ್ ಫೈನಲ್‌ನಲ್ಲಿ ಡಚ್‌ನ ಅಜಾಕ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

 ಯುನೈಟೆಡ್ ತಂಡದ ಪರ ಪಾಲ್ ಪೊಗ್ಬಾ 18ನೆ ನಿಮಿಷದಲ್ಲಿ ಮೊದಲು ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಖಿತ್ರಾಯನ್(48ನೆ ನಿಮಿಷ) ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಫೈನಲ್ ಪಂದ್ಯ ಆರಂಭಕ್ಕೆ ಸೋಮವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಬಾಂಬು ಸ್ಫೋಟದಲ್ಲಿ ಬಲಿಯಾದ 21 ಮಂದಿಗೆ ಮೊದಲು ವೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಯುನೈಟೆಡ್ ಆಟಗಾರರು, ಸಿಬ್ಬಂದಿ ಹಾಗೂ ಕ್ಲಬ್ ಯುರೋಪ್ ಲೀಗ್ ಫೈನಲ್ ಪಂದ್ಯದ ಗೆಲುವನ್ನು ಬಾಂಬು ಸ್ಫೋಟದಲ್ಲಿ ಬಲಿಯಾದವರಿಗೆ ಅರ್ಪಿಸಿದರು.

 ಇಡೀ ವಿಶ್ವ ಶೋಕಸಾಗರದಲ್ಲಿದೆ ಎಂದು ನಮಗೆ ಗೊತ್ತಿದೆ. ನಾವು ನಮ್ಮ ಪಂದ್ಯದತ್ತ ಗಮನ ನೀಡಬೇಕಾಗುತ್ತದೆ. ನಾವು ಮ್ಯಾಂಚೆಸ್ಟರ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದೇವೆ. ನಾವು ಇಂಗ್ಲೆಂಡ್, ಮ್ಯಾಂಚೆಸ್ಟರ್ ಹಾಗೂ ಬಾಂಬು ಸ್ಫೋಟದಲ್ಲಿ ಮೃತಪಟ್ಟವರಿಗಾಗಿ ಆಡಿದ್ದೇವೆ. ಈ ಋತುವಿನಲ್ಲಿ ಎಲ್ಲ ಪಂದ್ಯಗಳನ್ನು ಗೆಲ್ಲಬೇಕೆಂಬ ಗುರಿ ಇತ್ತು. ಆ ನಿಟ್ಟಿಯಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಾಧನೆ ಹೆಮ್ಮೆ ತಂದಿದೆ’’ ಎಂದು ಪೊಗ್ಬಾ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News