ಮೇಲ್ಮನವಿ ನ್ಯಾಯಾಧೀಶರಾಗಿ ಭಾರತೀಯ ಅಮೆರಿಕನ್ ನೇಮಕ :ಅಮೆರಿಕ

Update: 2017-05-26 14:38 GMT

ವಾಶಿಂಗ್ಟನ್, ಮೇ 26: ಸಿನ್ಸಿನಾಟಿಯಲ್ಲಿರುವ ಆರನೆ ಮೇಲ್ಮನವಿ ಸರ್ಕೀಟ್ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ಮೂಲದ ಅಮುಲ್ ಥಾಪರ್‌ರನ್ನು ಗುರುವಾರ ನೇಮಿಸಲಾಗಿದೆ.

ಅವರು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದಕ್ಕೆ ಆಯ್ಕೆಯಾದ ಎರಡನೆ ಭಾರತೀಯ ಅಮೆರಿಕನ್ ಆಗಿದ್ದಾರೆ.

ಅಮೆರಿಕದ ಸೆನೆಟ್ ಥಾಪರ್‌ರನ್ನು 52-44 ಮತಗಳ ಅಂತರದಿಂದ ಮೇಲ್ಮನವಿ ನ್ಯಾಯಾಧೀಶರಾಗಿ ಆಯ್ಕೆ ಮಾಡಿತು.

ಶ್ರೀ ಶ್ರೀನಿವಾಸನ್ ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದರ ಮೊದಲ ಭಾರತೀಯ ಅಮೆರಿಕನ್ ನ್ಯಾಯಾಧೀಶರಾಗಿದ್ದರು. ಅವರನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ 2013ರಲ್ಲಿ ನೇಮಿಸಿದ್ದರು.

47 ವರ್ಷದ ಥಾಪರ್ ಭಾರತೀಯ ವಲಸಿಗರಾದ ರಾಜ್ ಥಾಪರ್ ಮತ್ತು ವೀಣಾ ಭಲ್ಲಾ ದಂಪತಿಯ ಮಗನಾಗಿ ಡೆಟ್ರಾಯಿಟ್‌ನಲ್ಲಿ ಜನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News