ಸಿರಿಯ: ವಾಯು ದಾಳಿಯಲ್ಲಿ 50 ನಾಗರಿಕರ ಸಾವು

Update: 2017-05-26 15:50 GMT

ಬೆರೂತ್, ಮೇ 26: ಪೂರ್ವ ಸಿರಿಯದ ಅಲ್-ಮಾಯಾದಿನ್ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ವಾಯು ದಾಳಿಯಲ್ಲಿ ಕನಿಷ್ಠ 35 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಅಲ್-ಮಾಯಾದಿನ್ ಸಮೀಪ ಐಸಿಸ್ ನೆಲೆಗಳ ಮೇಲೆ ಮೇ 25 ಮತ್ತು 26ರಂದು ದಾಳಿ ನಡೆಸಲಾಗಿದ್ದು, ಫಲಿತಾಂಶವನ್ನು ಎದುರು ನೋಡಲಾಗುತ್ತಿದೆ ಎಂದು ಅಮೆರಿಕ ನೇತೃತ್ವದ ಮಿತ್ರಪಡೆಯ ವಕ್ತಾರರೋರ್ವರು ತಿಳಿಸಿದರು.

ಈ ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆದ ದಾಳಿಯಲ್ಲಿ ಒಟ್ಟು 50 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News