ಗಸ್ತುನಿರತ ಸೈನಿಕರ ಮೇಲೆ ಭಯೋತ್ಪಾದಕರ ದಾಳಿ: ಮುಂದುವರಿದ ಕಾರ್ಯಾಚರಣೆ
Update: 2017-05-26 23:27 IST
ಪುಲ್ವಾಮಾ, ಮೇ 26: ಗಸ್ತುನಿರತ ಸೈನಿಕರ ಮೇಲೆ ಭಯೋತ್ಪಾದಕರ ತಂಡವೊಂದು ದಾಳಿ ನಡೆಸಿದ ಘಟನೆ ಜಮ್ಮು ಕಾಶ್ಮೀರದ ಸೈಮೂಹ್ ಗ್ರಾಮದಲ್ಲಿ ನಡೆದಿದೆ. ಸೇನೆ ಹಾಗೂ ಪೊಲೀಸರ ತಂಡ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದೆ.
ಇಂದು ಬೆಳಗ್ಗೆ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಸೇನೆಯು ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದು ಎ.ಕೆ.47 ಬಂದೂಕುಗಳನ್ನು ವಶಪಡಿಸಿಕೊಂಡಿತ್ತು.