ಮುಸ್ಲಿಂ ಮಹಿಳೆಯರ ವಿರುದ್ಧ ಜನಾಂಗೀಯ ನಿಂದನೆ

Update: 2017-05-27 15:07 GMT

 ಪೋರ್ಟ್‌ಲ್ಯಾಂಡ್,ಮೇ 27: ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಮಹಿಳೆಯರಿಬ್ಬರಿಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಯೊಬ್ಬನನ್ನು ತಡೆಯಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳು ಇರಿತಕ್ಕೊಳಗಾಗಿ ಮೃತಪಟ್ಟ ಘಟನೆ ಅಮೆರಿಕದ ಪೋರ್ಟ್‌ಲ್ಯಾಂಡ್ ನಗರದಲ್ಲಿ ಶುಕ್ರವಾರ ನಡೆದಿದೆ.

 ಪವಿತ್ರ ರಂಝಾನ್ ತಿಂಗಳ ಆರಂಭಕ್ಕೆ ಕೆಲವೇ ತಾಸುಗಳ ಮೊದಲು ಈ ಘಟನೆ ನಡೆದಿದೆ. ಹಾಲಿವುಡ್ ಟ್ರಾನ್ಸಿಟ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಮ್ಯಾಕ್ಸ್ ರೈಲಿನಲ್ಲಿದ್ದ ಇಬ್ಬರು ಮುಸ್ಲಿ ಮಹಿಳೆಯರ ವಿರುದ್ಧ ಯುವಕನೊಬ್ಬ ಜನಾಂಗೀಯ ಹಾಗೂ ಧಾರ್ಮಿಕ ನಿಂದನೆಯ ಮಾತುಗಳನ್ನಾಡುತ್ತಿದ್ದಾಗ, ಮೂವರು ಮಧ್ಯಪ್ರವೇಶಿಸಿ ಆತನನ್ನು ತಡೆಯಲು ಯತ್ನಿಸಿದರು. ಆಗ ರೊಚ್ಚಿಗೆದ್ದ ಆತ ಮೂವರಿಗೆ ಚೂರಿಯಿಂದ ಇರಿದನೆನ್ನಲಾಗಿದೆ. ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೋರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ. ದಾಳಿಕೋರನು ರೈಲಿನಿಂದ ಇಳಿದ ಕೆಲವೇ ನಿಮಿಷಗಳ ಬಳಿಕ ಆತನನ್ನು ಬಂಧಿಸಲಾಗಿದೆಯೆಂದು ಪೋರ್ಟ್‌ಲ್ಯಾಂಡ್ ಪೋಲಿಸರು ತಿಳಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಖೆ ಧಾವಿಸುವ ಮುನ್ನ ಮುಸ್ಲಿಂ ಮಹಿಳೆಯರಿಬ್ಬರು ಸ್ಥವನ್ನು ಬಿಟ್ಟು ತೆರಳಿದ್ದರೆಂದು ಮೂಲಗಳು ತಿಳಿಸಿವೆ.

ಆದರೆ ಶಂಕಿತ ಹಂತಕ ಹಾಗೂ ದಾಳಿಯಲ್ಲಿ ಇರಿತಕ್ಕೊಳಗಾದವರ ಗುರುತುಗಳನ್ನು ಬಹಿರಂಗಪಡಿಸಲು ಪೋರ್ಟ್‌ಲ್ಯಾಂಡ್ ಪೊಲೀಸರು ನಿರಾಕರಿಸಿದ್ದಾರೆ.

  ಪೋರ್ಟ್‌ಲ್ಯಾಂಡ್‌ನಲ್ಲಿ ಶುಕ್ರವಾರ ನಡೆದ ಜನಾಂಗೀಯ ದ್ವೇಷದ ದಾಳಿಯನ್ನು ಅಮೆರಿಕನ್- ಇಸ್ಲಾಮಿಕ ಬಾಂಧವ್ಯಗಳ ಮಂಡಳಿ ಬಲವಾಗಿ ಖಂಡಿಸಿದೆ. ಡೊನಾಲ್ಡ್ ಟ್ರಂಪ್ ಅವರ ವಲಸಿಗ ವಿರೋಧಿ ಹೇಳಿಕೆಗಳ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಜನಾಂಗೀಯ ದ್ವೇಷದ ದಾಳಿಗಳ ಪ್ರಮಾಣದಲ್ಲಿ ಶೇ.50ರಷ್ಟು ಏರಿಕೆಯಾಗಿದೆಯೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News