ಟ್ಯಾಂಕ್ ಗೆ ಪೆಟ್ರೋಲ್ ತುಂಬಿಸಿದ ಬೈಕ್ ಸವಾರ ನಂತರ ಎಸಗಿದ ಅನಾಹುತವೇನು ಗೊತ್ತೇ?

Update: 2017-05-27 15:17 GMT

ಚೀನಾ, ಮೇ 27: ಗ್ಯಾಸ್ ಸ್ಟೇಷನ್ ನಲ್ಲಿ ಬೈಕ್ ಗೆ ತೈಲ ತುಂಬಿಸಿದ ವ್ಯಕ್ತಿಯೊಬ್ಬ ಪೆಟ್ರೋಲ್ ಟ್ಯಾಂಕ್ ಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವಿಲಕ್ಷಣ ಘಟನೆ ಚೀನಾದಲ್ಲಿ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ  ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನಾಹುತದ ಸಂದರ್ಭ ಸಾಹಸ ಮೆರೆದ ಗ್ಯಾಸ್ ಸ್ಟೇಷನ್ ಸಿಬ್ಬಂದಿಯ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ಚೀನಾದ ಸಿಚುವಾನ್ ಪ್ರಾಂತ್ಯದ ಯಿಬಿನ್ ಎಂಬಲ್ಲಿ ಈ ಘಟನೆ ನಡೆದಿದ್ದು, ಸ್ಟೇಷನ್ ಗೆ ಬಂದ ಬೈಕ್ ಸವಾರನೊಬ್ಬ ಪೆಟ್ರೋಲ್ ತುಂಬಿಸಿದ ನಂತರ ಟ್ಯಾಂಕ್ ಗೆ ಬೆಂಕಿ ಹಚ್ಚಿದ್ದಾನೆ. ಕೂಡಲೇ ಎಚ್ಚೆತ್ತ ಗ್ಯಾಸ್ ಸ್ಟೇಷನ್ ನ ಸಿಬ್ಬಂದಿಯೋರ್ವರು ಬೆಂಕಿ ನಂದಿಸುವ ಸಾಧನದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಾ ಹೋಗಿದ್ದು, ಗ್ಯಾಸ್ ಸ್ಟೇಷನ್ ನಲ್ಲಿದ್ದ ಎಲ್ಲಾ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಇದೇ ಸಂದರ್ಭ ಅಲ್ಲೇ ನಿಂತಿದ್ದ ಬೆಂಕಿ ಹಚ್ಚಿದ ವ್ಯಕ್ತಿ ಹೊತ್ತಿ ಉರಿಯುತ್ತಿರುವ ಬೈಕ್ ನ ಜ್ವಾಲೆಗೆ ಹಾರಿದ್ದಾನೆ. ಆತನನ್ನು ಬೆಂಕಿಯಿಂದ ಹೊರಗೆಳೆದ ಸಿಬ್ಬಂದಿ ಬೆಂಕಿ ನಂದಿಸುವಲ್ಲೂ ಸಫಲರಾಗಿದ್ದಾರೆ. ಸಂಭವಿಸಲಿದ್ದ ದೊಡ್ಡ ಅಪಾಯವೊಂದನ್ನು ತಪ್ಪಿಸಿದ ಗ್ಯಾಸ್ ಸ್ಟೇಷನ್ ಸಿಬ್ಬಂದಿಯ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಿಬ್ಬಂದಿಗೆ 65 ಸಾವಿರ ಯುವಾನ್ (6,11,000 ರೂ,) ಬಹುಮಾನ ನೀಡಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News