ಯುವರಾಜ್‌ಗೆ ಜ್ವರ: ನೆಟ್ ಪ್ರಾಕ್ಟೀಸ್‌ನಿಂದ ದೂರ

Update: 2017-05-27 16:19 GMT

ಲಂಡನ್,ಮೇ 27: ಭಾರತೀಯ ಕ್ರಿಕೆಟ್ ತಂಡ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಅಭ್ಯಾಸ ಆರಂಭಿಸಿದ್ದು, 15 ಆಟಗಾರರ ಪೈಕಿ 14 ಮಂದಿ ಪ್ರಾಕ್ಟೀಸ್‌ನಲ್ಲಿ ಪಾಲ್ಗೊಂಡರು. ಆದರೆ, ಆಲ್‌ರೌಂಡರ್ ಯುವರಾಜ್ ಸಿಂಗ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಅವರು ಜ್ವರದಿಂದ ಬಳಲುತ್ತಿದ್ದಾರೆಂದು ಗೊತ್ತಾಗಿದೆ.

ಯುವರಾಜ್ ಬುಧವಾರ ರಾತ್ರಿ ಲಂಡನ್‌ಗೆ ತಲುಪಿದಾಗ ಉಲ್ಲಾಸದಿಂದ ಇದ್ದರು. ಈ ನಡುವೆ ಏನಾಗಿದೆ ಎಂದು ಗೊತ್ತಾಗಿಲ್ಲ. ಟೀಮ್ ಮ್ಯಾನೇಜ್‌ಮೆಂಟ್ ವೈದ್ಯರನ್ನು ಸಂಪರ್ಕಿಸಿದೆ. ಯುವರಾಜ್‌ರ ಆರೋಗ್ಯದ ಮಾಹಿತಿಯು ಮುಂಬೈನಲ್ಲಿರುವ ಬಿಸಿಸಿಐ ಕಚೇರಿಗೆ ತಲುಪಿದೆ. ಯುವಿ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿದ್ದಾರೆಂದು ಟೀಮ್ ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ.

 ಯುವರಾಜ್‌ಗೆ ಬದಲಿ ಆಟಗಾರನ ಆಯ್ಕೆಯ ಬಗ್ಗೆ ಬಿಸಿಸಿಐ, ಟೀಮ್ ಮ್ಯಾನೇಜ್‌ಮೆಂಟ್ ಯಾವುದೇ ಮಾತುಕತೆ ನಡೆಸಿಲ್ಲ. ಆಯ್ಕೆ ಸಮಿತಿಗೆ ಈ ಬೆಳವಣಿಗೆ ಗೊತ್ತಿಲ್ಲದ ಕಾರಣ ಬದಲಿ ಆಟಗಾರನ ಚರ್ಚೆ ನಡೆದಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಸಹಿತ ಇಬ್ಬರು ಆಯ್ಕೆಗಾರರು ಲಂಡನ್‌ಗೆ ತೆರಳಿದ್ದು, ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News