4 ವರ್ಷದ ಮಗುವನ್ನು ಹೊತ್ತೊಯ್ದು ಕೊಂದುಹಾಕಿದ “ನರಭಕ್ಷಕ ಚಿರತೆ”

Update: 2017-05-27 17:37 GMT

ನೌಪಾಡಾ, ಮೇ 27: ತಾಯಿಯ ಜೊತೆ ಮಲಗಿದ್ದ 4 ವರ್ಷದ ಮಗುವನ್ನು ನರಭಕ್ಷಕ ಚಿರತೆಯೊಂದು ಹೊತ್ತೊಯ್ದು ಕೊಂದುಹಾಕಿದ ಘಟನೆ ಒಡಿಶಾದ ನೌಪಾಡಾದಲ್ಲಿ ನಡೆದಿದೆ.

ತಾಯಿಯ ಜೊತೆ ಮಲಗಿದ್ದ ಮಗುವನ್ನು ಚಿರತೆ ಮಧ್ಯರಾತ್ರಿ ಸಮಯದಲ್ಲಿ ಹೊತ್ತೊಯ್ದಿದ್ದು, ಮಗುವಿನ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದೆ.

“ನಾವು ಮನೆಯ ಹೊರಗಡೆ ಮಲಗಿದ್ದೆವು. ಚಿರತೆ ಮಗುವನ್ನು ಹೊತ್ತೊಯ್ದ ವಿಷಯ ತಡರಾತ್ರಿ 2 ಗಂಟೆಯ ಸುಮಾರಿಗೆ ತಿಳಿಯಿತು” ಎಂದು ಮಗುವಿನ ತಂದೆ ಹೇಳಿದ್ದಾರೆ,

ಮಗುವಿಗಾಗಿ ಹುಡುಕಾಟ ನಡೆಸಿದ ಪೋಷಕರು ಕೊನೆಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ರಕ್ತದ ಗುರುತಿನ ಆಧಾರದಲ್ಲಿ ಗ್ರಾಮಸ್ಥರು ಹುಡುಕಾಟ ಮುಂದುವರಿಸಿದ್ದಾರೆ. ರಕ್ತದ ಗುರುತುಗಳು ಕಾಡಿನಂಚಿನವರೆಗೂ ಇದ್ದು, ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

“ಈ ಪ್ರದೇಶದಲ್ಲಿ ಮಗುವನ್ನು ಚಿರತೆಯೊಂದು ಹೊತ್ತೊಯ್ದಿದೆ ಎಂದು ಬೆಳಗ್ಗಿನ ಸಮಯದಲ್ಲಿ ತಿಳಿದುಬಂತು, ತಕ್ಷಣವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದ್ದೆವು. ಕಾಡಿನೊಳಗೆ ಮಗುವಿನ ಅಸ್ಥಿಪಂಜರ ಹಾಗೂ ಚಿರತೆಯ ಉಗುರು ಹಾಗೂ ಕೂದಲು ಪತ್ತೆಯಾಗಿತ್ತು” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News