ಸ್ನಾತಕೋತ್ತರ ಪರೀಕ್ಷೆ ತೇರ್ಗಡೆಯಾದ ಬಿಹಾರದ ಖೈದಿಗಳು

Update: 2017-05-27 18:18 GMT

 ಪಾಟ್ನ, ಮೇ 27: ಪಾಟ್ನದ ಹೊರವಲಯದಲ್ಲಿರುವ ಬೆವುರ್ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರು ಖೈದಿಗಳು ಬಿಹಾರದ ನಳಂದ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಜುಲೈ 16ರಂದು ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ.

 ಸಮಾಜಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಪತ್ರಿಕೋದ್ಯಮ- ಈ ವಿಷಯಗಳಲ್ಲಿ ಆರು ಖೈದಿಗಳು ಸ್ನಾತಕೋತ್ತರ ಪದವಿ ಪಡೆದಿರುವ ಬಗ್ಗೆ ಬೆವುರ್ ಕಾರಾಗೃಹದ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದೆ. ಇವರನ್ನು ಘಟಿಕೋತ್ಸವ ನಡೆಯಲಿರುವ ಪಾಟ್ನದ ಎಸ್.ಕೆ.ಸ್ಮಾರಕ ಸಭಾಂಗಣಕ್ಕೆ ಕರೆತಂದು, ಕಾರ್ಯಕ್ರಮ ಮುಗಿದ ಬಳಿಕ ವಾಪಾಸು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದು ನಳಂದ ಮುಕ್ತ ವಿವಿಯ ಉಪಕುಲಪತಿ ಆರ್.ಕೆ.ಸಿನ್ಹ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News