ಮೆಲಾನಿಯರ ಜಾಕೆಟ್‌ಗೆ 32ಲಕ್ಷ ರೂ.!

Update: 2017-05-28 08:17 GMT

ಡೊನಾಲ್ಡ್ ಟ್ರಂಪ್‌ರ ಜೊತೆ ಅವರ ಪತ್ನಿ ಮೆಲಾನಿಯ ಕೂಡಾ ಚರ್ಚಾವಿಷಯವೇಆಗಿದ್ದಾರೆ. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂದಿನಿಂದ ಮೆಲಾನಿಯರ ಟ್ವೀಟ್‌ಗಳು, ಹೇಳಿಕೆಗಳು ವಿವಾದದ ಕಿಡಿ ಹಚ್ಚಿವೆ.

ಈಗ ಮೆಲಾನಿಯ ಪುನಃ ಜಗತ್ತಿನಾದ್ಯಂತ ಚರ್ಚಿಸಲ್ಪಡುತ್ತಿದ್ದಾರೆ. ಇಟಲಿ ಭೇಟಿಗೆ ಮೆಲಾನಿಯ ಧರಿಸಿದ್ದ ಟೋಚ್ಚೆ ಮತ್ತು ಗಬಾನ ವಿನ್ಯಾಸ ಮಾಡಿದ ಫ್ಲೋರಲ್ ಜಾಕೆಟ್ ಈಗ ಸುದ್ದಿಯ ಕೇಂದ್ರ ಬಿಂದು ಅಗಿದೆ. ಈ ಜಾಕೆಟ್‌ನಲ್ಲಿ ಬೇರೆ ಬೇರೆ ರೀತಿಯ ಹೂಗಳನ್ನು ಹೊಲಿಯಲಾಗಿದೆ.

ಬಹಳ ಚಂದದ ಜಾಕೆಟ್ ಆದರೆ ಬೆಲೆಯೂ ಅಷ್ಟೇ ಗಂಭೀರವಾಗಿದೆ. ಈ ಜಾಕೆಟ್ ಬೆಲೆ 51,000 ಅಮೆರಿಕನ್ ಡಾಲರ್- ಸುಮಾರು 32 ಲಕ್ಷ ಭಾರತೀಯ ರೂಪಾಯಿ. ಅಮೆರಿಕದ ಪ್ರಥಮ ಮಹಿಳೆ ದುಬಾರಿ ಜಾಕೆಟ್ ಧರಿಸಿದ ಬಗ್ಗೆ ವೈಟ್‌ಹೌಸ್ ಈವರೆಗೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News