ತೆರೇಸಾ ಬೆಂಬಲಿಗರಿಂದ ಹಿಂದಿಯಲ್ಲಿ ಚುನಾವಣಾ ಪ್ರಚಾರ ಹಾಡು

Update: 2017-05-28 16:59 GMT

ಲಂಡನ್,ಮೇ 28: ದೇಶದಲ್ಲಿ ನೆಲೆಸಿರುವ 10.60 ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ಜನಸಮುದಾಯದ ಮನವೊಲಿಸುವ ಪ್ರಯತ್ನವಾಗಿ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ರವಿವಾರ ಹಿಂದಿ ಭಾಷೆಯಲ್ಲಿ ಚುನಾವಣಾ ಪ್ರಚಾರ ಹಾಡೊಂದನ್ನು ಬಿಡುಗಡೆಗೊಳಿಸಿದೆ.

ಜೂನ್ 8ರಂದು ನಡೆಯಲಿರುವ ಬ್ರಿಟನ್ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ರಚಿಸಲಾಗಿರುವ ‘ತೆರೇಸಾ ಕೆ ಸಾಥ್’ ಹಿಂದಿ ಹಾಡನ್ನು ಕನ್ಸರ್ವೇಟಿವ್ ಪಕ್ಷದ ಭಾರತೀಯ ಸ್ನೇಹಿತರ ಸಂಘದ ಉಪಾಧ್ಯಕ್ಷ ಹಾಗೂ ಲಂಡನ್ ಮೂಲದ ಉದ್ಯಮಿ ರಂಜಿತ್ ಎಸ್.ಬಕ್ಷಿ ನಿರ್ಮಿಸಿದ್ದಾರೆ. ತೆರೇಸಾ ಮೇ ಮುಂದಿನ 5 ವರ್ಷಗಳ ಅವಧಿಗೆ ಪ್ರಧಾನಿಯಾಗಿ ಮುಂದುವರಿಯಲು ಬೆಂಬಲ ನೀಡುವಂತೆ ಈ ಹಾಡಿನಲ್ಲಿ ಭಾರತೀಯ ಮೂಲದ ಮತದಾರರಿಗೆ ಕರೆ ನೀಡಲಾಗಿದೆ.

ಪಂಡಿತ್ ದಿನೇಶ್ ಈ ಹಾಡಿಗೆ ಸಾಹಿತ್ಯ ಬರೆದು ಸಂಯೋಜಿಸಿದ್ದಾರೆ. ಭಾರತೀಯ ಕಲಾವಿದರಾದ ನವೀನ್ ಕುಂದ್ರಾ, ರಬಯ್ಯತ್ ಜಹಾನ್, ಉರ್ಮಿ ಚಕ್ರವರ್ತಿ, ರಾಜಾ ಕಸಫ್ ಹಾಗೂ ಕೇತನ ಕನ್ಸಾರಾ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News