ವ್ಯಕ್ತಿತ್ವ ಬದಲಾವಣೆಗೆ ಕಾರಣವಾಗುವ ರಮಝಾನ್ ಉಪವಾಸ: ಅಮರ್ ಕೋಟೆ

Update: 2017-05-29 11:20 GMT

"ದಾನ ಎಂಬುದು ಭಗವಂತನ ಪೂಜೆಗೆ ಸಮ. ಉಪವಾಸದ ಸಮಯದಲ್ಲಿ ಮುಸ್ಲಿಮರು ದಾನ ನೀಡುವುದರಲ್ಲಿ ನಿರತರಾಗುತ್ತಾರೆ. ಯಾರಿಗೆ ಸಹಾಯದ ಅವಶ್ಯಕತೆ ಇರುತ್ತದೋ ಅವರಿಗೆ ದಾನ ಮಾಡುವ ಮೂಲಕ ಸಮಾಜದಲ್ಲಿರುವ ಅಶಕ್ತರಿಗೆ ನೆರವಾಗುವುದು ಉಪವಾಸದ ಸಮಯದ ಒಂದು ಧನಾತ್ಮಕ ಅಂಶ." 

"ಉಪವಾಸ ಆರೋಗ್ಯದ ದೃಷ್ಟಿಯಿಂದ ಬಹಳ ಪರಿಣಾಮಕಾರಿ. ಧಾರ್ಮಿಕ ಕಾರಣವೊಂದೇ ಅಲ್ಲದೇ ದೈಹಿಕ, ಮಾನಸಿಕ ಆರೋಗ್ಯದ ಮೇಲೂ ಉಪವಾಸ ವಿಶೇಷ ಪರಿಣಾಮ ಬೀರುತ್ತದೆ. ನಾನು ಕೂಡಾ ನನ್ನ ಮುಸ್ಲಿಂ ಗೆಳೆಯರು ಒಂದು ತಿಂಗಳು ಆಚರಿಸುವ ಉಪವಾಸವನ್ನು ಗಮನಿಸುತ್ತೇನೆ. ಆ ಒಂದು ತಿಂಗಳು ಪೂರ್ತಿ ವ್ರತಾಚರಣೆಯಲ್ಲದೆ ತಮ್ಮ ವ್ಯಕ್ತಿತ್ವದಲ್ಲೂ ಗಣನೀಯವಾದ ಬದಲಾವಣೆ ಮಾಡಿಕೊಂಡಿರುತ್ತಾರೆ. ಮಾತಿನ ಮೇಲೆ ಹಿಡಿತ ಸಾಧಿಸುವುದು, ತಾಳ್ಮೆ ವಹಿಸುವುದು, ದುರಭ್ಯಾಸಗಳನ್ನು ತ್ಯಜಿಸುವುದು ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ."

"ಆರೋಗ್ಯದ ದೃಷ್ಟಿಯಿಂದ ನಾನು ನನ್ನ ಆಪ್ತಮಿತ್ರ ಮುಸ್ಲಿಂ ಗೆಳೆಯನೊಬ್ಬನ ಜೊತೆಗೆ ರಮಝಾನ್‌ನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸ ಹಿಡಿದು ಆತನಿಗೆ ಸಾಥ್ ನೀಡಿದ್ದೆ. ಉಪವಾಸಿಗರು ಮಸೀದಿಗೆ ಸಮಯಕ್ಕೆ ಸರಿಯಾಗಿ ತೆರಳುವುದು, ಬೆಳಗ್ಗೆ ಬೇಗನೆ ಏಳುವುದನ್ನು ನೋಡಿದಾಗ, ಏಕಪ್ರಕಾರವಾದ ಶಿಸ್ತು ಸಮುದಾಯದ ಎಲ್ಲರಲ್ಲೂ ಮೂಡುವುದನ್ನು ಕಂಡಾಗ ನಾನು ಅಚ್ಚರಿಗೊಳಗಾಗಿದ್ದೇನೆ. ಉಪವಾಸವು ಮುಸ್ಲಿಂ ಸಮುದಾಯದ ಜೀವನದಲ್ಲಿ ಪ್ರತೀ ವರ್ಷ ಬರುವ ಒಂದು ಧಾರ್ಮಿಕ ಕ್ರಮವಾದರೂ ಅದು ಸಮಾಜದ ಮೇಲೆ ಧನಾತ್ಮಕವಾದ ಪರಿಣಾಮವನ್ನು ಬೀರುತ್ತದೆ. ಉಪವಾಸಿಗರ ಬಗ್ಗೆ ಇತರ ಧರ್ಮೀಯರಿಗೂ ಉತ್ತಮ ಭಾವನೆ ಮೂಡುತ್ತದೆ.

 

 -ಅಮರ್ ಕೋಟೆ, ಅಧ್ಯಕ್ಷರು, ರೋಟರ್ಯಾಕ್ಟ್ ಕ್ಲಬ್, ಮೂಡುಬಿದಿರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News