ಪಾಕ್‌ನ ನಿಷೇಧಿತ ಸಂಘಟನೆಗಳು ‘ಫೇಸ್‌ಬುಕ್’ನಲ್ಲಿ ಸಕ್ರಿಯ

Update: 2017-05-30 15:50 GMT

ಇಸ್ಲಾಮಾಬಾದ್, ಮೇ 30: ಪಾಕಿಸ್ತಾನದ ನಿಷೇಧಿತ 64 ಸಂಘಟನೆಗಳ ಪೈಕಿ 41 ಫೇಸ್‌ಬುಕ್‌ನಲ್ಲಿ ಗ್ರೂಪ್ ಅಥವಾ ವೈಯಕ್ತಿಕ ಯೂಸರ್ ಪ್ರೊಫೈಲ್‌ಗಳ ಮೂಲಕ ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ ಎಂದು ಮಾಧ್ಯಮ ವರದಿಯೊಂದು ಸೋಮವಾರ ತಿಳಿಸಿದೆ.

ನಿಷೇಧಿತ ಸಂಘಟನೆಗಳಲ್ಲಿ ಸುನ್ನಿ ಮತ್ತು ಶಿಯಾ ವಿಭಜನವಾದಿ ಗುಂಪುಗಳು, ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಜಾಗತಿಕ ಭಯೋತ್ಪಾದಕ ಸಂಘಟನೆಗಳು ಹಾಗೂ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತಗಳ ಪ್ರತ್ಯೇಕತಾವಾದಿ ಸಂಘಟನೆಗಳು ಸೇರಿವೆ ಎಂದು ‘ಡಾನ್ ನ್ಯೂಸ್’ ಕಳೆದ ತಿಂಗಳು ನಡೆಸಿದ ತನಿಖೆಯಲ್ಲಿ ಹೊರಬಿದ್ದಿದೆ.

ಸಣ್ಣಪುಟ್ಟ ಸ್ಪೆಲಿಂಗ್ ವ್ಯತ್ಯಯಗಳನ್ನು ಹೊಂದಿರುವ ನಿಷೇಧಿತ ಸಂಘಟನೆಗಳನ್ನು ಜನರು ಫೇಸ್‌ಬುಕ್‌ನಲ್ಲಿ ಶೋಧಿಸುತ್ತಿದ್ದಾರೆ ಹಾಗೂ ನಿಷೇಧಿತ ಸಂಘಟನೆಗಳನ್ನು ಮುಕ್ತವಾಗಿ ಲೈಕ್ ಮಾಡಿದ ಪುಟಗಳು, ಗ್ರೂಪ್‌ಗಳು ಮತ್ತು ಯೂಸರ್ ಪ್ರೊಫೈಲ್‌ಗಳನ್ನು ಪತ್ತೆಹಚ್ಚುತ್ತಿದ್ದಾರೆ.

ಗಾತ್ರದ ಆಧಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿರುವ ಅತಿ ದೊಡ್ಡ ನಿಷೇಧಿತ ಸಂಘಟನೆಗಳೆಂದರೆ ಅಹ್ಲೆ ಸುನ್ನತ್ ವಾಲ್ ಜಮಾತ್ (200 ಪುಟಗಳು ಮತ್ತು ಗುಂಪುಗಳು), ಜೆಅಯ್ ಸಿಂಧ್ ಮುತ್ತಾಹಿದ ಮಹಾಝ್ (160), ಸಿಪಾಹಿ ಸಹಾಬ (148), ಬಲೂಚಿಸ್ತಾನ ಸ್ಟೂಡೆಂಟ್ಸ್ ಆರ್ಗನೈಸೇಶನ್ ಆಝಾದ್ (54) ಮತ್ತು ಸಿಪಾಹೆ ಮುಹಮ್ಮದ್ (45) ಎಂದು ‘ಡಾನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News