ಯುಎಇ: ಬಾಗಿಲು ಹಾಕಿದ ಮನಿ ಎಕ್ಸ್‌ಚೇಂಜ್, ಗ್ರಾಹಕರಿಗೆ ಲಕ್ಷಾಂತರ ದಿರ್ಹಮ್ ವಂಚನೆ

Update: 2017-05-30 16:00 GMT

ಅಬುಧಾಬಿ, ಮೇ 30: ಮನಿ ಎಕ್ಸ್‌ಚೇಂಜೊಂದು ಅನಿರೀಕ್ಷಿತವಾಗಿ ಬಾಗಿಲು ಹಾಕಿರುವುದು ಯುಎಇಯಲ್ಲಿನ ಅದರ ಗ್ರಾಹಕರ ಕಳವಳಕ್ಕೆ ಕಾರಣವಾಗಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.ಲಕ್ಷಾಂತರ ದಿರ್ಹಮ್‌ಗಳನ್ನು ಸಂಗ್ರಹಿಸಿದ ಬಳಿಕ ಈ ಮನಿ ಎಕ್ಸ್‌ಚೇಂಜ್‌ನ ಮಾಲೀಕ ಕಚೇರಿಯನ್ನು ಮುಚ್ಚಿ ತಲೆಮರೆಸಿಕೊಂಡಿದ್ದಾನೆ ಎಂದು ವಂಚಿತ ಗ್ರಾಹಕರು ಆರೋಪಿಸಿದ್ದಾರೆ.

ಈ ಮನಿ ಎಕ್ಸ್‌ಚೇಂಜ್ ಯುಎಇಯಲ್ಲಿ ಆರು ಶಾಖೆಗಳನ್ನು ಹೊಂದಿದೆ.
ಈ ಮನಿ ಎಕ್ಸ್‌ಚೇಂಜ್ ಮೂಲಕ ವಿದೇಶಗಳಲ್ಲಿರುವ ತಮ್ಮ ಮನೆಗಳಿಗೆ ಹಣ ಕಳುಹಿಸಿರುವ ವಲಸಿಗರು ಆತಂಕಿತರಾಗಿದ್ದಾರೆ.
ತಾವು ಕಷ್ಟಪಟ್ಟು ದುಡಿದ ಹಣ ರಾತೋರಾತ್ರಿ ನಾಪತ್ತೆಯಾಗಿದೆ ಎಂಬ ಸಂಕಟವನ್ನು ಅವರು ಪತ್ರಿಕೆಯೊಂದಿಗೆ ತೋಡಿಕೊಂಡಿದ್ದಾರೆ.
ಹಲವು ಗ್ರಾಹಕರು ಅಬುಧಾಬಿಯ ನ್ಯಾಯಾಲಯಗಳಲ್ಲಿ ದೂರು ದಾಖಲಿಸಿದ್ದಾರೆ.

ಮನೆ ನಿರ್ಮಾಣಕ್ಕಾಗಿ 25,000 ದಿರ್ಹಮ್‌ಗಳನ್ನು ಊರಿಗೆ ಕಳುಹಿಸಿರುವ ಕೇರಳದ ವ್ಯಕ್ತಿಯೊಬ್ಬರು, ‘‘ನಾನು ಬಹುತೇಕ ನನ್ನ ಒಂದು ವರ್ಷದ ಉಳಿತಾಯವನ್ನು ಕಳೆದುಕೊಂಡಿದ್ದೇನೆ’’ ಎಂದರು.
ಭಾರತೀಯ ಎ.ಎಸ್. ನಡೆಸುತ್ತಿರುವ ಮನಿ ಎಕ್ಸ್‌ಚೇಂಜ್ ಯುಎಇಯಲ್ಲಿ ಆರು ಶಾಖೆಗಳನ್ನು ಹೊಂದಿದೆ. ಅಬುಧಾಬಿಯಲ್ಲಿರುವ ಎರಡು ಶಾಖೆಗಳು ‘ಖಲೀಜ್ ಟೈಮ್ಸ್’ ಮೇ 28ರಂದು ಭೇಟಿ ನೀಡಿದ್ದಾಗ ಮುಚ್ಚಿದ್ದವು.
ದುಬೈಯಲ್ಲಿರುವ ಮೂರು ಶಾಖೆಗಳು ಮತ್ತು ಶಾರ್ಜಾದಲ್ಲಿರುವ ಒಂದು ಶಾಳೆ ಮೇ 24ರಿಂದ ಕಾರ್ಯಾಚರಿಸುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News