ಬೀಫ್‌ಫೆಸ್ಟ್: ಕೇರಳದ ವಿದ್ಯಾರ್ಥಿ ಮೇಲಿನ ಹಲ್ಲೆ ಖಂಡಿಸಿದ ಪಿಣರಾಯಿ

Update: 2017-05-31 05:59 GMT

ತಿರುವನಂತಪುರಂ, ಮೇ. 31: ಮದ್ರಾಸ್ ಐಐಟಿಯಲ್ಲಿ ನಡೆದ ಬೀಫ್ ಫೆಸ್ಟ್‌ನಲ್ಲಿ ಭಾಗವಹಿಸಿದ ಕೇರಳದ ಏರೊಸ್ಪೇಸ್ ಇಂಜಿನಿಯರಿಂಗ್ ಪಿಎಚ್‌ಡಿ ವಿದ್ಯಾರ್ಥಿ ಸೂರಜ್‌ರಿಗೆ ಬಲಪಂಥೀಯ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದ್ದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ.

ಬೀಫ್ ತಿಂದಿದ್ದಾರೆ ಎನ್ನುವುದಕ್ಕಾಗಿ ಕಣ್ಣು ಕುರುಡಾಗುವಂತೆ ಒಬ್ಬ ಯುವಕನಿಗೆ ಹೊಡೆದಿದ್ದು ದುರದೃಷ್ಟಕರವಾಗಿದೆ. ನಮ್ಮ ಸಂವಿಧಾನದಲ್ಲಿ ಅವರವರ ಸಂಪ್ರದಾಯದಂತೆ ಆಹಾರವನ್ನು ತಿನ್ನುವ ಸ್ವಾತಂತ್ರ್ಯ ನೀಡಲಾಗಿದೆ. ಬೀಫ್ ತಿನ್ನುವವರ ವಿರುದ್ಧ ಅಸಹನೆ ತೋರ್ಪಡಿಸುವುದು ಭಾರತ ಸಂವಿಧಾನ ಒದಗಿಸಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕೇರಳದ ವಿದ್ಯಾರ್ಥಿ ಸೂರಜ್‌ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ, ತಮಿಳ್ನಾಡು ಮುಖ್ಯಮಂತ್ರಿಯವರನ್ನು ವಿನಂತಿಸುವೆ ಎಂದು ಪಿಣರಾಯಿ ವಿಜಯನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News