ಕಾಣೆಯಾದ ಸುಖೋಯ್ ವಿಮಾನದ ಪೈಲೆಟ್‌ಗಳ ಮೃತದೇಹ ಪತ್ತೆ
ಗುವಾಹಟಿ,ಮೇ 31: ಚೀನದ ಗಡಿಭಾಗದಲ್ಲಿ ಕಾಣೆಯಾಗಿದ್ದ ಸುಖೋಯ್ -30 ವಾಯುಸೇನೆಯ ವಿಮಾನದ ಪೈಲೆಟ್‌ಗಳ ಮೃತದೇಹಗಳು ಪತ್ತೆಯಾಗಿದ್ದು,ಪೈಲೆಟ್‌ಗಳಾದ ಅಚ್ಚುದೇವ್(25)ಹಾಗೂ ದಿವೇಶ್ ಪಂಕಜ್‌ರ ಮೃತದೇಹ ನಿನ್ನೆ ಸಂಜೆ ನಡೆಸಿದ ಪತ್ತೆಕಾರ್ಯಾಚರಣೆಯಲ್ಲಿ ಗುರುತಿಸಲಾಗಿದ್ದು. ಪೈಲೆಟ್‌ಗಳಿಬ್ಬರ ಶರೀರದ ಅವಶೇಷಗಳು, ಪರ್ಸ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರಲ್ಲಿ ಅಚ್ಚುದೇವ್ ಕೇರಳದ ಪನ್ನಿಯೂರ್‌ಕುಳಂ ತಾನ್ನಿಕೋಡ್‌ನವರೆಂದು ಗೊತ್ತಾಗಿದೆ. ಇಬ್ಬರ ಮೃತದೇಹಗಳ ಅವಶೇಷಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಪುಣೆಗೆ ಕಳುಹಿಸಲಾಗುವುದು ಎಂದು ವಾಯುಸೇನೆ ಮೂಲಗಳು ತಿಳಿಸಿವೆ.
ಪುತ್ರ ಪತ್ತೆಯಾಗುವವರೆಗೂ ಹುಡುಕಾಟ ಮುಂದುವರಿಸಬೇಕೆಂದು ಅಚ್ಚುದೇವ್‌ರ ಹೆತ್ತವರು ವಾಯುಸೇನೆ ಅಧಿಕಾರಿಗಳನ್ನು ನಿನ್ನೆ ವಿನಂತಿಸಿಕೊಂಡಿದ್ದರು. ವಿಮಾನದ ಅವಶೇಷಗಳು, ಬ್ಲಾಕ್ ಬಾಕ್ಸ್ ಕಳೆದ ದಿವಸವೇ ಪತ್ತೆಯಾಗಿತ್ತು. ವಿಮಾನಕ್ಕೆ ಬೆಂಕಿ ಹಿಡಿದು ಸುಟ್ಟುಹೋಗಿದೆ. ಅದರಲ್ಲಿದ್ದ ಪೈಲೆಟ್‌ಗಳು ಬದುಕಿ ಉಳಿಯುವ ಸಾಧ್ಯತೆ ಇಲ್ಲ ಎಂದು ವಾಯುಸೇನಾ ಅಧಿಕಾರಿಗಳು ಪೈಲೆಟ್‌ಗಳ ಹೆತ್ತವರಿಗೆ ತಿಳಿಸಿದ್ದರು. ಆದರೆ ಪೈಲೆಟ್‌ಗಳು ಜೀವರಕ್ಷಕ ಸಲಕರಣೆಗಳನ್ನು ಉಪಯೋಗಿಸಿ ಪಾರಾಗಿರಬಹುದು. ಆದ್ದರಿಂದ ಹುಡಕಾಟ ಕೊನೆಗೊಳಿಸಬಾರದೆಂದು ಇಸ್ರೊದ ಮಾಜಿ ವಿಜ್ಞಾನಿ ಕೂಡಾ ಆಗಿರುವ ಅಚ್ಚುದೇವ್‌ರ ತಂದೆ ಸೈನ್ಯವನ್ನು ವಿನಂತಿಸಿದ್ದರು.