×
Ad

ಇವರು ಪೊಲೀಸ್ ಕಳ್ಳರು !

Update: 2017-05-31 12:19 IST

ರೋಹ್ಟಕ್,ಮೇ 31 : ಪೊಲೀಸ್ ಇಲಾಖೆಗೇ ಮುಜುಗರ ಉಂಟು ಮಾಡುವ ಪ್ರಕರಣವೊಂದು ನಡೆದಿದ್ದು ಹರ್ಯಾಣಾದ ಜಿಂದ್ ಜಿಲ್ಲೆಯ ಸಫಿದೊನ್ ಪಟ್ಟಣದ ತರಕಾರಿ ಮಾರುಕಟ್ಟೆಯೊಂದರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕಲ್ಲಂಗಡಿ ಕದಿಯುತ್ತಿರುವ ವೀಡಿಯೊವೊಂದು ಬಹಿರಂಗಗೊಂಡಿದೆ.

ಘಟನೆ ಸೋಮವಾರ ರಾತ್ರಿ 1.30ಕ್ಕೆ ನಡೆದಿದೆಯೆನ್ನಲಾಗಿದ್ದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಂತೆ ಮೋಟಾರ್ ಸೈಕಲಿನಲ್ಲಿ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸಿದ್ದ ಇಬ್ಬರು ಪೊಲೀಸರು ರಹಸ್ಯವಾಗಿ ಎರಡು ಗೋಣಿ ತುಂಬಾ ಕಲ್ಲಂಗಡಿ ಹಣ್ಣುಗಳನ್ನು ಕದ್ದೊಯ್ದಿದ್ದಾರೆ. ಅಲ್ಲಿನ ಕಾವಲುಗರನೊಬ್ಬ ಇದನ್ನು ನೋಡಿ ಅವರನ್ನು ತಡೆಯಲು ಯತ್ನಿಸಿದ್ದರೂ ಆತನಿಗೆ ಲಾಠಿಯಿಂದ ಹೊಡೆದು ಅವರು ಅಲ್ಲಿಂದ ಪರಾರಿಯಾಗಿದ್ದರು.

ಇಬ್ಬರು ಆರೋಪಿಗಳನ್ನು ವಿಶೇಷ ಪೊಲೀಸ್ ಅಧಿಕಾರಿ ಸುನೇಹ್ರ ಸಿಂಗ್ ಹಾಗೂ ಹೋಂಗಾರ್ಡ್ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರಿಗೆ ಆ ಪ್ರದೇಶದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ರಾತ್ರಿ ಪಾಳಿಯ ಡ್ಯೂಟಿ ನೀಡಲಾಗಿತ್ತು.

ಪೊಲೀಸರಿಂದ ಹಲ್ಲೆಗೊಳಗಾದ ಕಾವಲುಗಾರ ಪ್ರೇಮ್ ಬಹಾದ್ದುರ್ ಪೊಲೀಸ್ ದೂರು ದಾಖಲಿಸಿದ್ದಾನೆ. ಜಿಂದ್ ಜಿಲ್ಲೆಯ ಎಸ್ಪಿ ಶಶಾಂಕ್ ಆನಂದ್ ಪ್ರಕರಣದ ತನಿಖೆ ನಡೆಸಿದ್ದು ತಪ್ಪಿತಸ್ಥರೆಂದು ಕಂಡು ಬಂದ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News