×
Ad

ಸಾಫ್ಟ್ ವೇರ್ ಇಂಜಿನಿಯರ್ ಯುವತಿಯ ಗುಂಡಿಕ್ಕಿ ಕೊಲೆ

Update: 2017-05-31 15:49 IST

ನೋಯ್ಡಾ, ಮೇ 31: ಸಾಫ್ಟ್ ವೇರ್ ಇಂಜಿನಿಯರ್ ಯುವತಿಯೋರ್ವಳನ್ನು ದುಷ್ಕರ್ಮಿಯೋರ್ವ ಗುಂಡಿಕ್ಕಿ ಕೊಂದ ಘಟನೆ ಶತಾಬ್ದಿ ರೈಲ್ ವಿಹಾರ್ ಸೊಸೈಟಿ ಬಳಿ ನಡೆದಿದೆ.

ಲಾವಾ ಕಂಪೆನಿಯಲ್ಲಿ ಗ್ರಾಜ್ಯುವೇಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಂಜಲಿ ರಾಥೋರ್ ರನ್ನು ಆಕೆಯ ಪ್ರಿಯತಮ ಕೊಲೆಗೈದಿರಬೇಕು ಎಂದು ಶಂಕಿಸಲಾಗಿದೆ.

ಆಕೆ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಏರಿಯಾದಲ್ಲಿ ಕೊಲೆಗೈಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಅಪಾರ್ಟ್ ಮೆಂಟ್ ನ ಮೂರನೆ ಮಹಡಿಯಲ್ಲಿ ಇತರ ಆರು ಮಂದಿಯೊಂದಿಗೆ ವಾಸವಾಗಿದ್ದ ಅಂಜಲಿಗೆ ಆಕೆಯ ಪ್ರಿಯತಮ ಕರೆ ಮಾಡಿದ್ದ. ಈ ಹಿನ್ನೆಲೆಯಲ್ಲಿ  ಆಕೆ ಪಾರ್ಕಿಂಗ್ ಏರಿಯಾಗೆ ಬಂದಿದ್ದು, ಅಲ್ಲೇ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News