ಇನ್ನು ಬ್ಯಾಂಕ್ ಖಾತೆಯನ್ನೂ ‘ಪೋರ್ಟ್’ ಮಾಡಬಹುದು!: ಬ್ಯಾಂಕ್ ಬದಲಾದರೂ ಖಾತೆ ಸಂಖ್ಯೆ ಅದೇ

Update: 2017-05-31 12:39 GMT

ಮುಂಬೈ, ಮೇ 31: ಮೊಬೈಲ್ ನಂಬ್ರವನ್ನು ಬದಲಿಸದೆ ಇನ್ನೊಂದು ಕಂಪೆನಿಗೆ ಬದಲಾಯಿಸಬಹುದು ಎನ್ನುವ ರೀತಿಯಲ್ಲಿ ಇನ್ನು ಖಾತೆ ನಂಬರ್‌ನ್ನು ಈಗಿರುವ ಬ್ಯಾಂಕಿನಿಂದ ಬೇರೆ ಯಾವ ಬ್ಯಾಂಕಿಗೆ ಬೇಕಾದರೂ ವರ್ಗಾಯಿಸುವ ವ್ಯವಸ್ಥೆ ಆಗಮಿಸುತ್ತಿದೆ. ಹಳೆಯ ವ್ಯವಹಾರಗಳು ನಷ್ಟವಾಗದೆ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಖಾತೆ

ವರ್ಗಾಯಿಸಲು ಆಗುತ್ತಿರುವುದು ಹೊಸ ವ್ಯವಸ್ಥೆಯ ವಿಶೇಷತೆಯಾಗಿದೆ. ಆಧಾರ್ ಕಾರ್ಡ್‌ಗೆ ಜೋಡಿಸುವುದು, ತಂತ್ರಜ್ಞಾನದ ಸಾಧ್ಯತೆಗಳ ಪ್ರಯೋಜನದಲ್ಲಿ ಇದು ಸಾಧ್ಯವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ವ್ಯಕ್ತಿಯ ವಿಶೇಷ ಗುರುತು ನಂಬರ್ ಆಗಿ ಆಧಾರ್‌ಕಾರ್ಡ್ ಬದಲಾಗುತ್ತದೆ. ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯದ ಕೇಂದ್ರೀಕೃತ ಹಣಕಾಸು ವ್ಯವಹಾರ ವ್ಯವಸ್ಥೆಯು ಕೂಡಾ ಅದರೊಂದಿಗೆ ಸೇರುವಾಗ ಫೋರ್ಟ್ ಬಿಲಿಟಿ ಯಥಾರ್ಥಗೊಳಿಸುವುದು ಸುಲಭ ಎಂದು ರಿಸರ್ವ್‌ಬ್ಯಾಂಕ್ ಆಫ್ ಇಂಡಿಯ ಸ್ಪಷ್ಟಪಡಿಸಿದೆ.

ಕಳೆದ ಎರಡು ವರ್ಷಗಳ ತಂತ್ರಜ್ಞಾನದಲ್ಲಿ ಬಹುದೊಡ್ಡ ಪ್ರಗತಿ ಯಾಗಿದೆ. ಆಧಾರ್ ಸೇರ್ಪಡೆ ಜಾರಿಯಾಯಿತು. ಐಎಂಪಿಎಸ್ ಸಹಿತ ಹಣಕಾಸು ಹಸ್ತಾಂತರ ವ್ಯವಸ್ಥೆಗಳು ಜಾರಿಗೊಂಡಿದೆ. ಇದರೊಂದಿಗೆ ಪೋರ್ಟೇಬಿಲಿಟಿಯನ್ನು ಸುಲಭದಲ್ಲಿ ಜಾರಿಗೆಗೊಳಿಸಬಹುದು ಎಂದು ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಸ್‌ಎಸ್ ಮುಂದ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News