ಅಸೈಗೋಳಿ: ಕಳಪೆ ರಸ್ತೆ ಕಾಮಗಾರಿ ಆರೋಪ:ಕಾಂಕ್ರೀಟ್ ರಸ್ತೆ ಮೇಲೆ ಮತ್ತೆ ಕಾಂಕ್ರೀಟು ತೇಪೆ!

Update: 2017-05-31 13:44 GMT

ಕೊಣಾಜೆ, ಮೇ 31: ಕೊಣಾಜೆ ಗ್ರಾಮ ಪಂ. ವ್ಯಾಪ್ತಿಯ ಅಸೈಗೋಳಿ ಬಳಿ ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿ ಮಾಡಲಾಗಿದೆ ಎನ್ನುವ ಆಕ್ಷೇಪದ ಹಿನ್ನೆಲೆಯಲ್ಲಿ  ಕಾಂಕ್ರೀಟ್ ರಸ್ತೆಯ ಮೇಲೆ ಎರಡನೇ ಭಾರಿ ಕಾಂಕ್ರೀಟ್ ತೇಪೆ ಹಾಕುವ ಕೆಲಸ ನಡೆದಿದೆ.
   

ಕೊಣಾಜೆ ಗ್ರಾಮ ಪಂ. ಅಸೈಗೋಳಿಯಲ್ಲಿ ಎಸ್ಸಿ-ಎಸ್ಟಿ ಕಾಲನಿಗೆ ಐದು ತಿಂಗಳ ಹಿಂದೆ ಎಂಟು ಲಕ್ಷ ರೂ. ವೆಚ್ಚದಲ್ಲಿ 160 ಮೀಟರ್ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು. ಆದರೆ ಗುತ್ತಿಗೆದಾರ ಕಳಪೆಯಾಗಿ ಕಾಮಗಾರಿ ನಿರ್ವಹಿಸಿದ್ದು ಈ ಬಗ್ಗೆ ಸ್ಥಳೀಯರು ಗ್ರಾಮಸಭೆಯಲ್ಲಿ ಆಕ್ಷೇಪ ಎತ್ತಿದ್ದಲ್ಲದೆ, ಈ ಬಗ್ಗೆ ಇಂಜಿನಿಯರ್‌ಗೂ ದೂರು ನೀಡಿದ್ದರು. ಪರಿಶೀಲನೆ ಬಳಿಕ ಎರಡನೇ ಬಾರಿ ಮೂರು ಇಂಚ್‌ನಲ್ಲಿ ಕಾಂಕ್ರೀಟ್ ಹಾಕುವಂತೆ ಇಂಜಿನಿಯರ್ ಗುತ್ತಿಗೆದಾರನಿಗೆ ಸೂಚಿಸಿದ್ದರು.

ಅದರಂತೆ ಬುಧವಾರ ಎರಡನೇ ಬಾರಿ ಕಾಮಗಾರಿ ಆರಂಭವಾಗಿದೆ. ಈ ಸಂದರ್ಭವೂ ಮೂರು ಇಂಚು ಬದಲು ಎರಡು ಇಂಚಿನಲ್ಲಿ ಕಾಂಕ್ರೀಟ್ ಹಾಕಲಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪಿಸಿದರು. ಬಳಿಕ ಮೂರು ಇಂಚಿನಲ್ಲಿ ಕಾಂಕ್ರೀಟ್ ಹಾಕುವಂತೆ ಸ್ಥಳೀಯರು ನೋಡಿಕೊಂಡರು.

ಮಳೆಯ ನಡುವೆಯೂ ಕಾಮಗಾರಿ:
ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ಕಾಂಕ್ರೀಟ್ ಮೇಲೆ ಮತ್ತೆ ಕಾಂಕ್ರಿಟ್ ಹಾಕುವ ಕೆಲಸ ನಡೆಯುತ್ತಿದ್ದೆಯಾದರೂ ಮಳೆ ಸುರಿಯುತ್ತಿರುವ ನಡೆಯುವ ಕಾಮಗಾರಿ ಮುಂದುವರಿದಿದೆ. ಇದು ಎಷ್ಟರ ಮಟ್ಟಿಗೆ ರಸ್ತೆ ಗಟ್ಟಿಯಾಗಬಹುದು ಮಾತ್ರವಲ್ಲ ಸರಕಾರಿ ಯೋಜನೆಗಳು ಈ ರೀತಿಯಲ್ಲಿ ಹಾದಿ ತಪ್ಪುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಾದ ರತ್ನಾಕರ ಕಕ್ಕೆಮಜಲು, ಸನತ್ ಕುಮಾರ್, ಸಂಕಪ್ಪ, ಚೇತನ್ ಕುಮಾರ್, ಶೈಲೇಶ್, ಮನೋಜ್, ರವಿ ದಡಸ್ ಸಹಿತ ಇನ್ನಿತರರು ಉಪಸ್ಥಿತರಿದ್ದರು.

‘ಅಸೈಗೋಳಿಯಲ್ಲಿ ಎಸ್ಸಿ-ಎಸ್ಟಿ ಕಾಲನಿಗೆ ಹಾಕಲಾದ ಕಾಂಕ್ರೀಟ್ ಕಳಪೆಯಾಗಿದೆ ಎನ್ನುವ ದೂರಿನ ಆಧಾರದಲ್ಲಿ ಎರಡನೇ ಬಾರಿ ಕಾಮಗಾರಿ ನಡೆಯುತ್ತಿದೆ, ಪಂ. ನಿಂದ ಎಂಟು ಲಕ್ಷ ರೂ. ಪಾವತಿಯಾಗಿದ್ದು, ಎರಡನೇ ಬಾರಿ ಹಣ ಪಾವತಿಸುವ ನಿಯಮ ಪಂಚಾಯತ್ ನಲ್ಲಿ ಇಲ್ಲ’
ಕೇಶವ ಪೂಜಾರಿ, ಗ್ರಾ.ಪಂ. ಪಿಡಿಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News