ರಿಯಾದ್: ಶಾಲೆಯಲ್ಲಿ ಗುಂಡಿನ ದಾಳಿ; ಇಬ್ಬರು ಮೃತ್ಯು

Update: 2017-05-31 14:47 GMT

ರಿಯಾದ್, ಮೇ 31: ಇಲ್ಲಿನ ಶಾಲೆಯೊಂದರಲ್ಲಿ ಅಪರಿಚಿತನೋರ್ವ ನಡೆಸಿದ ಗುಂಡಿನ ದಾಳಿಯಿಂದ ಅಮೆರಿಕನ್ ಪ್ರಜೆಯೊಬ್ಬ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಶಾಲೆಯ ಅಮೆರಿಕನ್ ಮ್ಯಾನೇಜರ್ ಹಾಗೂ ಓರ್ವ ಸೌದಿ ಪ್ರಜೆ ಕಿಂಗ್ ಡಮ್ ಸ್ಕೂಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ಸಂದರ್ಭ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗಳಿರಲಿಲ್ಲ ಎಂದು ಅಮೆರಿಕನ್ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಸೌದಿಯ ಉದ್ಯಮಿ ಪ್ರಿನ್ಸ್ ಅಲ್ ವಲೀದ್ ಬಿನ್ ತಲಾಲ್ ಅವರಿಗೆ ಸೇರಿದ್ದ ಕಂಪೆನಿಯೊಂದರಿಂದ ಈ ಶಾಲೆ ನಡೆಸಲ್ಪಡುತ್ತಿತ್ತು ಎಂದು ತಿಳಿದುಬಂದಿದೆ.

ಶಾಲೆಯಿಂದ ಹೊರಹಾಕಲ್ಪಟ್ಟಿದ್ದ ಇರಾಕಿ ಶಿಕ್ಷಕ  ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News