ಬೀಫ್ ತಿನ್ನುವ ಮೂಲಕ ಜನರ ಹೋರಾಟ ಬೆಂಬಲಿಸಿದ ಸಸ್ಯಾಹಾರಿ ಶಾಸಕ!: ವಿಡಿಯೋ ವೈರಲ್

Update: 2017-06-01 12:13 GMT

ಕೇರಳ, ಜೂ.1: ಕಸಾಯಿಖಾನೆಗಳಿಗೆ ಗೋಸಾಗಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಂತೂ ಬೀಫ್ ಉತ್ಸವಗಳನ್ನು ಆಯೋಜಿಸಿರುವ ಜನರು ತಮ್ಮ ಹಕ್ಕನ್ನು ತಡೆಯಲು ಬರಬೇಡಿ ಎಂದು ಕೇಂದ್ರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಜನರ ಹಕ್ಕು ಹಾಗೂ ಅವರ ಆಯ್ಕೆಗಳಿಗೆ ಗೌರವ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಸ್ಯಾಹಾರಿಯಾಗಿದ್ದ ಕೇರಳದ ಶಾಸಕರೊಬ್ಬರು ಬೀಫ್ ತಿನ್ನುವ ಮೂಲಕ ಜನರ ಬೆಂಬಲಕ್ಕೆ ನಿಂತು ಸುದ್ದಿಯಾಗಿದ್ದಾರೆ.

ತ್ರಿತಲಾದ ಕಾಂಗ್ರೆಸ್ ಶಾಸಕ ವಿ.ಟಿ. ಬಲರಾಮ್ ಸುಮಾರು 19 ವರ್ಷಗಳಿಂದ ಸಸ್ಯಾಹಾರಿಯಾಗಿದ್ದರು. ಕೇರಳ ಸ್ಟೂಡೆಂಟ್ಸ್ ಯುನಿಯನ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಕೇಂದ್ರ ಸರಕಾರದ ವಿರುದ್ಧ ಜನರ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಬೀಫ್ ಸೇವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 2.50 ಲಕ್ಷ ವೀವ್ಸ್ ಹಾಗೂ 3.470 ಬಾರಿ ಶೇರ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News