'ಬಾಂಬ್’ನೊಂದಿಗೆ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ
ಕೌಲಾಲಂಪುರ, ಜೂ. 1: ಮೆಲ್ಬರ್ನ್‌ನಿಂದ ಕೌಲಾಲಂಪುರಕ್ಕೆ ಹೊರಟಿದ್ದ ತನ್ನ ಎಂಎಚ್128 ವಿಮಾನವೊಂದು ಪ್ರಯಾಣಿಕನೊಬ್ಬನ ದಾಂಧಲೆಯಿಂದಾಗಿ ಹಾರಾಟ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಮೆಲ್ಬರ್ನ್‌ಗೆ ವಾಪಸಾಯಿತು ಎಂದು ಮಲೇಶ್ಯ ಏರ್‌ಲೈನ್ಸ್ ಹೇಳಿದೆ.
ತನ್ನಲ್ಲಿ ಬಾಂಬ್ ಇದೆ ಎಂಬುದಾಗಿ ಆ ಪ್ರಯಾಣಿಕ ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದರು.
‘‘ವಿಮಾನ ಅಪಹರಣವಾಗಿಲ್ಲ. ಓರ್ವ ದಾಂಧಲೆಕೋರ ಪ್ರಯಾಣಿಕ ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ’’ ಎಂದು ಮಲೇಶ್ಯದ ಉಪ ಸಾರಿಗೆ ಸಚಿವ ಅಬ್ದುಲ್ ಅಝೀಝ್ ಬಿನ್ ಕಪ್ರವಿ ತಿಳಿಸಿದರು.
‘‘ತನ್ನಲ್ಲಿ ಬಾಂಬ್ ಇದೆ ಎಂಬುದಾಗಿ ಶ್ರೀಲಂಕಾ ಪ್ರಜೆಯಾಗಿರುವ ಪ್ರಯಾಣಿಕ ಹೇಳಿದನು. ಆದರೆ, ಅದು ಬಾಂಬ್ ಆಗಿರಲಿಲ್ಲ, ಪವರ್‌ಬ್ಯಾಂಕ್ (ಹೆಚ್ಚುವರಿ ಮೊಬೈಲ್ ಬ್ಯಾಟರಿ)ಆಗಿತ್ತು’’ ಎಂದರು.
ವಿಮಾನ ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕನನ್ನು ಬಂಧಿಸಿದರು ಎಂದು ಏರ್‌ಲೈನ್ಸ್ ತಿಳಿಸಿದೆ.