ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತ: ವಿಶ್ವ ಶ್ರೇಷ್ಠ ಗಾಲ್ಫರ್ ಟೈಗರ್ ವುಡ್ಸ್ ಬಂಧನ
Update: 2017-06-01 22:04 IST
ಫ್ಲೋರಿಡಾ, ಜೂ.1: ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಆರೋಪದಲ್ಲಿ ವಿಶ್ವವಿಖ್ಯಾತ ಗಾಲ್ಫರ್ ಟೈಗರ್ ವುಡ್ಸ್ ರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಾಗೂ ಫೋಟೊಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಟೈಗರ್ ವುಡ್ಸ್ ಕಾರು ಅಪಘಾತಕ್ಕೀಡಾಗಿರುವುದು ಕಂಡುಬಂದಿದೆ.
ಪೊಲೀಸ್ ಕಾರಿನಲ್ಲಿದ್ದ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಟೈಗರ್ ವುಡ್ಸ್ ಬಂಧನದ ಚಿತ್ರಣ ಸೆರೆಯಾಗಿದೆ. ಪಾನಮತ್ತರಾಗಿದ್ದ ವುಡ್ಸ್ ನಡೆದಾಡಲೂ ಸಾಧ್ಯವಾಗದೆ, ಪೊಲೀಸರ ಪ್ರಶ್ನೆಗೆ ಉತ್ತರಿಸಲು ತಡವರಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ವಿಶ್ವಶ್ರೇಷ್ಠ ಗಾಲ್ಫರ್ ಟೈಗರ್ ವುಡ್ಸ್ ತಮ್ಮ ಅದ್ಭುತ ಪ್ರದರ್ಶನದಿಂದ ಒಂದೊಮ್ಮೆ ಹೆಸರಾಗಿದ್ದವರು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಅವರು ಸದಾ ವಿವಾದಗಳಿಗೆ ತುತ್ತಾಗುತ್ತಿದ್ದಾರೆ.