​ಪುದು: ಅನಿಯಮಿತ ವಿದ್ಯುತ್ ಕಡಿತ ಸರಿಪಡಿಸಲು ಎಸ್.ಡಿ.ಪಿ.ಐ.ಯಿಂದ ಮೆಸ್ಕಾಂಗೆ ಮನವಿ

Update: 2017-06-02 04:57 GMT

ಫರಂಗಿಪೇಟೆ ಜೂ.2: ಪುದು ಗ್ರಾಮದಲ್ಲಿ ಕಳೆದ ಕೆಳವು ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತವಾಗುತ್ತಿದ್ದು, ಉಪವಾಸದ ಸಂದರ್ಭದಲ್ಲಿ ರಮಝಾನ್ ಇಫ್ತಾರ್, ಸಹರಿ, ವಿಶೇಷ ಪ್ರಾರ್ಥನೆ ಮುಂತಾದ ಅಗತ್ಯಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ಎಸ್.ಡಿ.ಪಿ.ಐ. ಪುದು ಗ್ರಾಮ ಸಮಿತಿಯು ಪುದು ಗ್ರಾಮದ ಮೆಸ್ಕಾಮ್ ಇಲಾಖೆ ಅಭಿಯಂತರಿಗೆ ಮನವಿ ಸಲ್ಲಿಸಿತು.

ಕಳೆದ ವರ್ಷವೂ ರಮಝಾನ್‌ನಲ್ಲಿ ಇದೇ ರೀತಿ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭ ಎಸ್.ಡಿ.ಪಿ.ಐ. ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಹತ್ತನೆ ಮೈಲ್ ಕಲ್ಲು, ಉಪಾದ್ಯಕ್ಷ ಜಮಾಲುದ್ದೀನ್, ಗ್ರಾಪಂ ಮಾಜಿ ಸದಸ್ಯ ಇಕ್ಬಾಲ್ ಅಮೆಮಾರ್, ಸಮಿತಿಯ ಸದಸ್ಯರಾದ ನಝೀರ್ 10ನೆ ಮೈಲ್ ಕಲ್ಲು, ಅಬ್ಬಾಸ್ ಪೇರಿಮಾರ್, ಇಬ್ರಾಹೀಂ ಮಾರಿಪ್ಪಳ್ಳ, ಶರೀಫ್ ಡಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News