×
Ad

ಫೆಡರೇಶನ್ ಕಪ್: ಕೂಟ ದಾಖಲೆಯೊಂದಿಗೆ ನೀರಜ್ ಚೋಪ್ರಾಗೆ ಚಿನ್ನ

Update: 2017-06-02 23:14 IST

ಪಟಿಯಾಲ, ಜೂ.2: ಫೆಡರೇಶನ್ ಕಪ್ ನ್ಯಾಶನಲ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ದವಿಂದರ್ ಸಿಂಗ್‌ರನ್ನು ಮಣಿಸಿದ ನೀರಜ್ ಚೋಪ್ರಾ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 85.63 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದ ಚೋಪ್ರಾ 2015ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಫೆಡರೇಶನ್ ಕಪ್‌ನಲ್ಲಿ 79.65 ಮೀ. ದೂರಕ್ಕೆ ಜಾವೆಲಿನ್ ಎಸೆದು ಕೂಟ ದಾಖಲೆ ನಿರ್ಮಿಸಿದ್ದ ದೇವೇಂದರ್ ಸಿಂಗ್ ದಾಖಲೆಯನ್ನು ಅಳಿಸಿಹಾಕಿ ಹೊಸ ಕೂಟ ದಾಖಲೆ ನಿರ್ಮಿಸಿದರು.

83.82 ಮೀ. ದೂರಕ್ಕೆ ಜಾವೆಲಿನ್ ಎಸೆದ ದವಿಂದರ್ ಸಿಂಗ್ ಎರಡನೆ ಸ್ಥಾನ ಪಡೆದರು. ಉತ್ತರ ಪ್ರದೇಶದ ಅಭಿಷೇಕ್ ಸಿಂಗ್(77 ಮೀ.)ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

 ಇದೇ ವೇಳೆ ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ 300 ಮೀ. ಕ್ರಮಿಸಿದ ಬಳಿಕ ನೆಲಕ್ಕೆ ಉರುಳಿದ ನ್ಯಾಶನಲ್ ಚಾಂಪಿಯನ್ ಟಿಂಟು ಲೂಕ ಸ್ಪರ್ಧೆಯನ್ನು ಮುಗಿಸಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News