×
Ad

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ : ಈ ಬಾರಿ ಬಾಲಕರ ಮೇಲುಗೈ

Update: 2017-06-03 18:12 IST

ಹೊಸದಿಲ್ಲಿ, ಜೂ.3: ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ನಡೆಸಿದ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶೇ.90.95ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.5ರಷ್ಟು ಕಡಿಮೆ ಯಾಗಿದೆ . ಈ ಬಾರಿ ಬಾಲಕಿಯರನ್ನು ಹಿಂದಿಕ್ಕಿ ಬಾಲಕರು ಮೇಲುಗೈ ಸಾಧಿಸಿರುವುದು ಗಮನಾರ್ಹವಾಗಿದೆ .

ಒಟ್ಟು 16,60,123 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದರು.ತೇರ್ಗಡೆಯಾದ ಬಾಲಕರ ಪ್ರಮಾಣ ಶೇ.93.4 ಆಗಿದ್ದರೆ ಶೇ.92.2ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ತಿರುವನಂತಪುರಂ ಶೇ.99.85 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, ಮದ್ರಾಸ್ ಶೇ.99.62, ಅಲ್ಲಹಾಬಾದ್ ಶೇ.98.23 ಫಲಿತಾಂಶ ಸಾಧಿಸಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದೆ.

 ಕಳೆದ ವರ್ಷ ಶೇ. 91.06 ಫಲಿತಾಂಶ ಸಾಧಿಸಿದ್ದ ದಿಲ್ಲಿ , ಈ ಬಾರಿ ಕೇವಲ ಶೇ.78.09 ಫಲಿತಾಂಶ ಪಡೆದಿದೆ.

 ಇಂದು(ಶನಿವಾರ) ಬೆಳಿಗ್ಗೆ ಫಲಿತಾಂಶ ಪ್ರಕಟಿಸಲು ನಿಗದಿಯಾಗಿದ್ದ ವೇಳೆಗಿಂತ ಅರ್ಧ ಗಂಟೆ ಮೊದಲು ಸಂಸ್ಥೆಯ ವೆಬ್‌ಸೈಟ್ ಸ್ಥಗಿತಗೊಂಡ ಕಾರಣ ವಿದ್ಯಾರ್ಥಿಗಳು ಮತ್ತು ಪೋಷಕರು ಮತ್ತಷ್ಟು ಕಾಯುವಂತಾಯಿತು. ದಿಲ್ಲಿ, ಅಲಹಾಬಾದ್, ಚೆನ್ನೈ, ಡೆಹ್ರಡೂನ್ ಮತ್ತು ತ್ರಿವೇಂಡ್ರಮ್- ಈ ಐದು ವಲಯಗಳ ಫಲಿತಾಂಶ ಪ್ರಕಟಿಸಲಾಗಿದೆ.ಉಳಿದ ವಲಯಗಳ ಫಲಿತಾಂಶ ಶೀಘ್ರವೇ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ವರ್ಷ ಕಠಿಣ ಪ್ರಶ್ನೆಗೆ ಕೃಪಾಂಕ ನೀಡಲಾಗದು ಎಂದು ಸಿಬಿಎಸ್‌ಇ ತಿಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳ ಪೋಷಕರು ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ಮುಗಿದ ಬಳಿಕ ಕೃಪಾಂಕ ನೀಡುವುದಿಲ್ಲ ಎಂದು ಪ್ರಕಟಿಸುವಂತಿಲ್ಲ ಎಂದು ಸೂಚಿಸಿದ್ದ ಕೋರ್ಟ್, ಕೃಪಾಂಕ ನೀತಿ ಮುಂದುವರಿಸುವಂತೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News