×
Ad

ಶಾಲೆಯ ಆವರಣದಲ್ಲಿತ್ತು 14 ಲಕ್ಷ ರೂ. ಮೌಲ್ಯದ ವಿದೇಶಿ ಮದ್ಯ!

Update: 2017-06-03 18:19 IST

ಪಾಟ್ನಾ, ಜೂ.3: ಶಾಲೆಯ ಆವರಣವೊಂದರಿಂದ ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ಉತ್ತರ ಬಿಹಾರದ ನರ್ತಕಿಯಾಗಂಜ್ ನಲ್ಲಿ ನಡೆದಿದೆ.

ಡಿಎಸ್ಪಿ ಅಮಾನ್ ಕುಮಾರ್ ನೇತೃತ್ವದಲ್ಲಿ ಒವಿಎಸ್ ಇಂಟರ್ ನ್ಯಾಶನಲ್ ಸ್ಕೂಲ್ ಮೇಲೆ ದಾಳಿ ನಡೆಸಿದ ಪೊಲೀಸರು 249 ಕಾರ್ಟನ್ ನಷ್ಟು ಭಾರತದಲ್ಲಿ ತಯಾರಿಸಲ್ಪಟ್ಟ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಮಹೀಂದ್ರಾ ಸ್ಕಾರ್ಪಿಯೋ, ಬೊಲೆರೋ ಹಾಗೂ ಜೀಪೊಂದನ್ನು ವಶಪಡಿಸಿಕೊಂಡಿದ್ದಾರೆ.

ಮದ್ಯ ವ್ಯಾಪಾರಿ ಬಿರೇಂದ್ರ ಗುಪ್ತಾ, ಟ್ರಕ್ ಚಾಲಕ ಅಜ್ಮೋರ್ ಸೆಖ್ವಾತ್, ಅಜಯ್ ಹಾಗೂ ಸಾಹೇಬ್ ರಾಮ್ ಎಂಬವರನ್ನು ಪೊಲಿಸರು ವಿಚಾರಣೆಗೊಳಪಡಿಸಿದ್ದು, ಶಾಲೆಯ ಮಾಲಕ ರಾಕೇಶ್ ಪಾಂಡೆಗೆ ಸೇರಿದ ಸೊತ್ತುಗಳು ಇದಾಗಿದೆ ಎಂದು ಬಂಧಿತರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News