ಬಿಎಸ್ಎಫ್ ಕಾರ್ಯಾಚರಣೆ: 4 ಲಕ್ಷ ಮುಖಬೆಲೆಯ ನಕಲಿ ನೋಟುಗಳ ವಶ

Update: 2017-06-04 13:14 GMT
ಮಾಲ್ಡಾ, ಜೂ.4: ನೂತನ 2 ಸಾವಿರ ರೂ. ಮುಖಬೆಲೆಯ 4,98,000 ನಕಲಿ ನೋಟುಗಳನ್ನು ಗಡಿಭದ್ರತಾ ಪಡೆ ವಶಪಡಿಸಿಕೊಂಡಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬಿಎಸ್ ಎಫ್ ಭಾರತ-ಬಾಂಗ್ಲಾ ಗಡಿಪ್ರದೇಶದಿಂದ ಈ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಕಾರ್ಯಾಚರಣೆಯ ವೇಳೆ ಕತ್ತಲಾಗಿದ್ದರಿಂದ ದಂಧೆಕೋರರು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡಿರುವ ನೋಟುಗಳನ್ನು ಕಲಿಯಾಚಕ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News