ಸ್ವಾಮಿನಾರಾಯಣ ದೇವಸ್ಥಾನಕ್ಕೆ ಬ್ರಿಟನ್ ಪ್ರಧಾನಿ ಭೇಟಿ
ಲಂಡನ್, ಜೂ. 4: ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ತನ್ನ ಗಂಡ ಫಿಲಿಪ್ ಜೊತೆಗೆ ಶನಿವಾರ ವಾಯುವ್ಯ ಲಂಡನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬ್ರಿಟನ್ ಸಂಸತ್ತಿಗೆ ಜೂನ್ 8ರಂದು ಚುನಾವಣೆ ನಡೆಯಲಿದ್ದು, ಅದಕ್ಕಿಂತ ದಿನಗಳ ಮುಂಚೆ ತೆರೇಸಾ ಭೇಟಿ ನೀಡಿದ್ದಾರೆ.
ಲಂಡನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವು ಭಾರತದ ಹೊರಗಿನ ಅತ್ಯಂತ ದೊಡ್ಡ ಹಿಂದೂ ದೇವಾಲಯವಾಗಿದೆ.
ದೇವಾಲಯಕ್ಕೆ ಭೇಟಿ ನೀಡಿದ 60 ವರ್ಷದ ಪ್ರಧಾನಿ, ಭಗವಾನ್ ಸ್ವಾಮಿನಾರಾಯಣನಿಗೆ ಪುಷ್ಪ ದಳಗಳನ್ನು ಅರ್ಪಿಸಿದರು ಎಂದು ದೇವಸ್ಥಾನದ ವಕ್ತಾರರೋರ್ವರು ತಿಳಿಸಿದರು.
ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯಲ್ಲಿರುವ ಯುವ ಮತ್ತು ಹಿರಿಯ ಸ್ವಯಂಸೇವಕರನ್ನು ಭೇಟಿಯಾದ ಬಳಿಕ, ಬ್ರಿಟನ್ ಪ್ರಧಾನಿ ಇತರ ಹಿಂದೂ ಸಂಸ್ಥೆಗಳ ನಾಯಕರನ್ನು ಭೇಟಿಯಾದರು ಎಂದು ವಕ್ತಾರ ಹೇಳಿದರು.
ಈ ಸಂದರ್ಭದಲ್ಲಿ 20 ನಿಮಿಷಗಳ ಕಾಲ ಭಾಷಣ ಮಾಡಿದ ಅವರು, ಬ್ರಿಟನನ್ನು ಜಗತ್ತಿನ ಅತಿ ದೊಡ್ಡ ಸಾಧಕರ ನಾಡನ್ನಾಗಿ ಮಾಡಲು ತನಗೆ ಸಹಾಯ ಮಾಡುವಂತೆ ಅವರು ದೇವಸ್ಥಾನದಲ್ಲಿ ಸೇರಿದ್ದ ಸುಮಾರು 2,000 ಭಕ್ತರಲ್ಲಿ ಮಾಡಿದರು.