×
Ad

ಪಾಕ್‌ನಿಂದ ‘ಭಾರತೀಯ ನೆಲೆಗಾದ ಹಾನಿ’ಯನ್ನು ತೋರಿಸುವ ವೀಡಿಯೊ

Update: 2017-06-04 20:24 IST

ಇಸ್ಲಾಮಾಬಾದ್, ಜೂ. 4: ಗಡಿ ನಿಯಂತ್ರಣ ರೇಖೆಯ ಭಾರತೀಯ ಭಾಗದಲ್ಲಿ ಭಾರತೀಯ ಸೇನಾ ನೆಲೆಗಳಿಗೆ ಹಾನಿಯಾಗಿರುವುದನ್ನು ತೋರಿಸುವ ವೀಡಿಯೊವಂದನ್ನು ಪಾಕಿಸ್ತಾನಿ ಸೇನೆ ರವಿವಾರ ಬಿಡುಗಡೆಗೊಳಿಸಿದೆ.

ಗಡಿ ನಿಯಂತ್ರಣ ರೇಖೆಯ ಟಟ್ಟಾ ಪಾನಿ ವಲಯದಲ್ಲಿ ಭಾರತದ ‘ಅಪ್ರಚೋದಿತ ಯುದ್ಧವಿರಾಮ ಉಲ್ಲಂಘನೆ’ಗೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಐವರು ಭಾರತೀಯ ಸೈನಿಕರು ಹತರಾಗಿದ್ದಾರೆ ಎಂದು ಹೇಳಿಕೊಂಡ ಒಂದು ದಿನದ ಬಳಿಕ ಪಾಕಿಸ್ತಾನಿ ಸೇನೆ ಈ ವೀಡಿಯೊ ಬಿಡುಗಡೆ ಮಾಡಿದೆ.

ಪಾಕಿಸ್ತಾನಿ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ರವಿವಾರ ಮುಂಜಾನೆ ಈ 27 ಸೆಕೆಂಡ್‌ಗಲ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಾಕಿದರು.

ವೀಡಿಯೊ ನಕಲಿ: ಭಾರತೀಯ ಸೇನೆ

ಪಾಕಿಸ್ತಾನಿ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತೀಯ ಸೇನೆ ರವಿವಾರ ನಿರಾಕರಿಸಿದೆ.

ಪಾಕಿಸ್ತಾನಿ ಸೇನೆ ಬಿಡುಗಡೆ ಮಾಡಿದ ವೀಡಿಯೊ ನಕಲಿ ಹಾಗೂ ಸೃಷ್ಟಿಸಿದ್ದಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News