ಹಿಜಾಬ್‌ ಧರಿಸಿದ ಬಾಲಕಿಯರನ್ನು ಮನೆಗೆ ಕಳುಹಿಸಿದ ಶಾಲೆ

Update: 2017-06-04 15:25 GMT

ವಾಶಿಂಗ್ಟನ್, ಜೂ. 4: ಹಿಜಾಬ್ ಧರಿಸಿರುವುದಕ್ಕಾಗಿ ಇಬ್ಬರು ಮುಸ್ಲಿಮ್ ಬಾಲಕಿಯರನ್ನು ಅಮೆರಿಕದ ಶಾಲೆಯೊಂದು ಮನೆಗೆ ಕಳುಹಿಸಿದೆ. ವಿದ್ಯಾರ್ಥಿನಿಯರು ಧಾರ್ಮಿಕ ಕಾರಣಗಳಿಗಾಗಿ ಶಿರವಸ್ತ್ರವನ್ನು ಧರಿಸಿದ್ದಾರೆ ಎನ್ನುವುದನ್ನು ತಿಳಿಸುವ ‘ಹೆತ್ತವರ ಪತ್ರ’ವನ್ನು ವಿದ್ಯಾರ್ಥಿನಿಯರು ಹೊಂದಿರಲಿಲ್ಲ ಎನ್ನುವ ಕಾರಣಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ವರ್ಜೀನಿಯದ ಫ್ರೀಡಂ ಹೈಸ್ಕೂಲ್‌ನಲ್ಲಿ ಕಲಿಯುತ್ತಿರುವ ಸೋದರ ಸಂಬಂಧಿಗಳಾದ ಹಜಾ ಬಾಹ್ ಮತ್ತು ಫಾತಿಮತ್ ಮನ್ಸಾರೇ ಈ ಶಿಕ್ಷೆಗೆ ಗುರಿಯಾದವರು.

ತಾವು ಹಿಜಾಬ್ ಧರಿಸುತ್ತಿರುವುದಕ್ಕಾಗಿ ಶಾಲಾ ಆಡಳಿತ ತಮಗೆ ಕಿರುಕುಳ ನೀಡುತ್ತಿತ್ತು ಎಂದು ಬಾಲಕಿಯರು ಆರೋಪಿಸಿದ್ದಾರೆ.

ಬಳಿಕ, ಈ ಘಟನೆಯ ಬಗ್ಗೆ ಶಾಲೆ ಕ್ಷಮೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News