ಅರಬ್ ರಾಜತಾಂತ್ರಿಕ ಬಿಕ್ಕಟ್ಟು: ದೋಹಾಕ್ಕೆ ಹಾರುವ ವಿಮಾನಗಳ ಸ್ಥಗಿತ

Update: 2017-06-05 14:39 GMT

ಯುಎಇ, ಜೂನ್.5 : ಕತರ್‌ಗೆ ಹಾರುವ ಎಲ್ಲ ವಿಮಾನಗಳನ್ನು ಜೂನ್6ರಿಂದ ಸ್ಥಗಿತಗೊಳಿಸಲಾಗುವುದು ಎಂದು ಯುಎಇಯ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್, ಎತಿಹಾದ್, ಫ್ಲೈದುಬೈ ಮತ್ತು ಏರ್‌ಅರೇಬಿಯಗಳು ಸೋಮವಾರ ಘೋಷಿಸಿವೆ.

ಶಾರ್ಜಾ ಮತ್ತು ದೋಹಾ ನಡುವಿನ ವಿಮಾನಗಳನ್ನು ಸ್ಥಗಿತಗೊಳಿಸಿರುವುದಾಗಿ ಏರ್‌ಅರೇಬಿಯಹೇಳಿದೆ.

ಏರ್‌ಲೈನ್‌ನ ದೋಹಾಕ್ಕೆ ಹೋಗುವ ಕೊನೆಯ ವಿಮಾನ ಸೋಮವಾರ ಸಂಜೆ 6.30ಕ್ಕೆ ಶಾರ್ಜಾದಿಂದ ಹೊರಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News