ನರಿಮೊಗರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

Update: 2017-06-06 17:51 GMT

ಪುತ್ತೂರು, ಜೂ.6: ತಾಲೂಕಿನ ನರಿಮೊಗರು ಹಿರಿಯ ಪ್ರಾಥಮಿಕ ಶಾಲೆ, ಜಿಲ್ಲಾ ಪ್ರಶಸ್ತಿ ವಿಜೇತೆ ಪ್ರಖ್ಯಾತಿ ಯುವತಿ ಮಂಡಲ, ನರಿಮೊಗರು ಯುವಕ ಮಂಡಲ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನರಿಮೊಗರು ಶಾಲೆಯಲ್ಲಿ ಜರಗಿತು.

ಕಾರ್ಯಕ್ರದಲ್ಲಿ ಮಾತನಾಡಿದ ಸ್ಥಳೀಯ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಅವರು ಪರಿಸರ ನಾಶದಿಂದ ದಿನೇ ದಿನೇ ಶಾಖ ಜಾಸ್ತಿಯಾಗುತ್ತಿದೆ. ಪ್ರಕೃತಿಯನ್ನೇ ದೇವರೆಂದು ನಂಬಿರುವ ದೇಶ ನಮ್ಮದು. ಪ್ರಕೃತಿ ಉಳಿದರೆ ಮಾತ್ರ ನಾವು ಉಳಿಯಬಹುದು. ಹಿಂದಿನ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ಮಳೆಗಾಲ, ವಸಂತಕಾಲ ಬರುತಿತ್ತು, ನಾವು ಪ್ರಕೃತಿ ನಾಶ ಮಾಡಿದರ ಪರಿಣಾಮವಾಗಿ ಬಿಸಿಲು ಮಾತ್ರ ನಮಗೆ ಉಳಿದಿದೆ. ಪ್ರತಿಯೊಬ್ಬರು ಪರಿಸರವನ್ನು ಮರಗಿಡಗಳನ್ನು ಹಾರೈಕೆ ಕಡೆ ಗಮನ ಕೊಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಮಳೆಯೇ ಇಲ್ಲದೇ ಮರು ಭೂಮಿಯಾಗಬಹುದು. ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. ನಮ್ಮ ಸುತ್ತಲೂ ಪರಿಸರ ಉಳಿಸುವುದರೊಂದಿಗೆ ಸ್ವಚ್ಚತೆಗೂ ಮೊದಲ ಆಧ್ಯತೆ ನೀಡಬೇಕೆಂದರು.

ಶಾಲಾ ಸುತ್ತಮುತ್ತ ವಿವಿಧ ಜಾತಿಯ ಸುಮಾರು 100 ಗಿಡಗಳನ್ನು ನೆಡಲಾಯಿತು. ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ, ಸದಸ್ಯ ಜಯರಾಮ್ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್, ಜಿಲ್ಲಾ ಪ್ರಶಸ್ತಿ ವಿಜೇತೆ ಪ್ರಖ್ಯಾತಿ ಯುವತಿ ಮಂಡಳದ ಗುರುಪ್ರಿಯ ನಾಯಕ್, ನರಿಮೊಗರು ಯುವ ಮಂಡಳದ ಅಧ್ಯಕ್ಷ ಸುಧಾಕರ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News