ಎವರೆಸ್ಟ್ ಏರಿದ ಕ್ಯಾನ್ಸರ್ ರೋಗಿ

Update: 2017-06-07 13:57 GMT

ಲಂಡನ್, ಜೂ. 7: ಅಂತಿಮ ಘಟ್ಟದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ 47 ವರ್ಷದ ಬ್ರಿಟಿಶ್ ವ್ಯಕ್ತಿಯೊಬ್ಬರು ಜಗತ್ತಿನ ಅತ್ಯುನ್ನತ ಶಿಖರ ವೌಂಟ್ ಎವರೆಸ್ಟ್ ಏರಿದ್ದಾರೆ.

ಇಯಾನ್ ಟೂಟ್‌ಹಿಲ್ ಈ ಸಾಧನೆಗೈದ ಮೊದಲ ಕ್ಯಾನ್ಸರ್ ರೋಗಿ ಎಂದು ಭಾವಿಸಲಾಗಿದೆ. ಅವರು ಇನ್ನು ಕೆಲವೇ ತಿಂಗಳು ಬದುಕಬಹುದು ಎಂದು ವೈದ್ಯರು ಹೇಳಿದ್ದಾರೆ.

ಶೆಫೀಲ್ಡ್ ವೆನಸ್‌ಡೇ ಫುಟ್ಬಾಲ್ ಕ್ಲಬ್‌ನ ಅಭಿಮಾನಿಯಾಗಿರುವ ಅವರು ಸೋಮವಾರ ಶಿಖರವನ್ನು ಏರಿದ್ದು, ದತ್ತಿ ಉದ್ದೇಶಕ್ಕಾಗಿ ಎದುರಾಳಿ ಶೆಫೀಲ್ಡ್ ಯುನೈಟೆಡ್‌ನ ಧ್ವಜವನ್ನು ಶಿಖರದಲ್ಲಿ ಊರಿದ್ದಾರೆ.

ಇದಕ್ಕಾಗಿ ಅವರು ಕ್ಯಾನ್ಸರ್ ಪೀಡಿತರ ಹಿತರಕ್ಷಣೆ ಸಂಸ್ಥೆ ‘ಮ್ಯಾಕ್ಮಿಲನ್’ಗಾಗಿ 31,500 ಪೌಂಡ್ (ಸುಮಾರು 26.17 ಲಕ್ಷ ರೂಪಾಯಿ) ಸಂಗ್ರಹಿಸಿದ್ದಾರೆ.

ಶೆಫೀಲ್ಡ್ ನಿವಾಸಿಯಾಗಿರುವ ಅವರು ಲಂಡನ್‌ನ ವಿಲ್ಸ್‌ಡನ್ ಗ್ರೀನ್‌ನಲ್ಲಿ ವಾಸಿಸುತ್ತಿದ್ದಾರೆ.

ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು 2015ರ ಜೂನ್‌ನಲ್ಲಿ ಪತ್ತೆಯಾಗಿತ್ತು. ನೀವು ಕ್ಯಾನ್ಸರನ್ನು ಜಯಿಸಿದ್ದೀರಿ ಎಂಬುದಾಗಿ ಅವರಿಗೆ 2016ರ ಆದಿಭಾಗದಲ್ಲಿ ಹೇಳಲಾಗಿತ್ತು. ಆದರೆ, ಬಳಿಕ ಕ್ಯಾನ್ಸರ್ ಮರಳಿರುವುದು ಪತ್ತೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News