ಮ್ಯಾನ್ಮಾರ್ ಸೇನಾ ವಿಮಾನ ಪತನ: 116 ಪ್ರಯಾಣಿಕರ ಸುಳಿವಿಲ್ಲ

Update: 2017-06-07 15:50 GMT

ಯಾಂಗೊನ್, ಜೂ.7: 116 ಮಂದಿ ಪ್ರಯಾಣಿಕರಿದ್ದ ಮ್ಯಾನ್ಮಾರ್‌ನ ಸೇನಾಪಡೆಯ ವಿಮಾನವೊಂದು ದಕ್ಷಿಣದ ನಗರಗಳಾದ ಮಿಯಿಕ್ ಮತ್ತು ಯಾಂಗೊನ್ ಪಟ್ಟಣದ ಮಧ್ಯೆ ನಾಪತ್ತೆಯಾಗಿದ್ದು ವಿಮಾನದ ಅವಶೇಷ ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿರುವುದಾಗಿ ಸೇನಾಪಡೆಯ ಮುಖ್ಯಸ್ಥರು ತಿಳಿಸಿದ್ದಾರೆ.

   105 ಪ್ರಯಾಣಿಕರು ಮತ್ತು 11 ಸಿಬ್ಬಂದಿ ವರ್ಗದವರು ಇದ್ದ ವಿಮಾನವು ಅಪರಾಹ್ನ 1.35ರ ವೇಳೆ ಸಂಪರ್ಕ ಕಳೆದುಕೊಂಡಿತು. ಈ ಸಂದರ್ಭ ವಿಮಾನವು ಅಂಡಮಾನ್ ಸಮುದ್ರದ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿತ್ತು. ಪ್ರಯಾಣಿಕರಲ್ಲಿ ಬಹುತೇಕ ಮಂದಿ ಸೇನಾಪಡೆಯ ಸಿಬ್ಬಂದಿಗಳ ಕುಟುಂಬ ವರ್ಗದವರಾಗಿದ್ದಾರೆ. ಆನಂತರ ವಿಮಾನದ ಅವಶೇಷ ಗಳು ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಶೋಧ ಕಾರ್ಯಾಚರಣೆಗೆ ನೌಕೆ ಮತ್ತು ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಸೇನಾಪಡೆಯ ಕೇಂದ್ರ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಂತ್ರಿಕ ವೈಫಲ್ಯದಿಂದಾಗಿ ವಿಮಾನ ಪತನಗೊಂಡಿರಬೇಕೆಂದು ಮ್ಯಾನ್ಮಾರ್‌ನ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News