ನೇಪಾಳ ಪ್ರಧಾನಿಯಾಗಿ ದೇವುಬ ಪ್ರಮಾಣ
Update: 2017-06-07 22:00 IST
ಕಠ್ಮಂಡು, ಜೂ. 7: ನೇಪಾಳಿ ಕಾಂಗ್ರೆಸ್‌ನ ಮುಖ್ಯಸ್ಥ ಶೇರ್ ಬಹಾದುರ್ ದೇವುಬ ಬುಧವಾರ ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಸಚಿವ ಸಂಪುಟದ ಏಳು ಸದಸ್ಯರೂ ಪ್ರಮಾಣವಚನ ಸ್ವೀಕರಿಸಿದರು.
ಅಧ್ಯಕ್ಷರ ಕಚೇರಿಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಪ್ರಧಾನಿ ಮತ್ತು ಇತರ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.