ಟೆಹ್ರಾನ್ ದಾಳಿಯ ಹಿಂದೆ ಅಮೆರಿಕ, ಸೌದಿ ಅರೇಬಿಯಾ ಕೈವಾಡ: ಇರಾನ್ ಸೇನೆ

Update: 2017-06-07 16:38 GMT

ಟೆಹ್ರಾನ್, ಜೂ.7: ಐಸಿಸ್ ನಿಂದ ಇರಾನ್ ನ ಮೇಲೆ ನಡೆದ ದಾಳಿಗೆ ಪ್ರತೀಕಾರ ಕೈಗೊಳ್ಳುವುದಾಗಿ ತಿಳಿಸಿರುವ ಇರಾನ್ ಸೇನೆ ಇಲೈಟ್ ರೆವೆಲ್ಯೂಶನರಿ ಗಾರ್ಡ್ಸ್ ದಾಳಿಯ ಹಿಂದೆ ವಾಷಿಂಗ್ಟನ್ ಹಾಗೂ ರಿಯಾದ್ ನ ಕೈವಾಡವಿದೆ ಎಂದಿದೆ.

“ಅಮಾಯಕರ ರಕ್ತ ಚೆಲ್ಲಿದ್ದಕ್ಕೆ ಪ್ರತೀಕಾರ ತೆಗೆದುಕೊಳ್ಳದೆ ಸುಮ್ಮನಿರುವುದಿಲ್ಲ ಎನ್ನುವುದನ್ನು ಈಗಾಗಲೇ ಕ್ರಾಂತಿಕಾರಿ ಪಡೆಗಳು ನಿರೂಪಿಸಿವೆ” ಎಂದು ಹೇಳಿಕೆಯೊಂದರಲ್ಲಿ ಅದು ತಿಳಿಸಿದೆ.

“ಅಮೆರಿಕ ಅಧ್ಯಕ್ಷರು ಸೌದಿ ಅರೇಬಿಯಾ ಸರಕಾರವನ್ನು ಭೇಟಿಯಾದ ವಾರದ ನಂತರ ನಡೆದ ಈ ಕೃತ್ಯ ಸೌದಿಯೂ ಈ ದಾಳಿಯಲ್ಲಿ ಪಾಲ್ಗೊಂಡಿದೆ ಎನ್ನುವುದನ್ನು ನಿರೂಪಿಸಿದೆ” ಎಂದಿದೆ.

ಇರಾನಿಯನ್ ಸಂಸತ್ತು ಹಾಗೂ ಆಯತುಲ್ಲಾ ರೂಹುಲ್ಲಾ ಖೊಮೈನಿಯವರ ಸಮಾಧಿ ಸ್ಥಳಕ್ಕೆ ನುಗ್ಗಿದ ಆತ್ಮಾಹುತಿ ಬಾಂಬರ್ ಗಳು ಹಾಗೂ ಸಶಸ್ತ್ರಧಾರಿಗಳಾಗಿದ್ದ ಭಯೋತ್ಪಾದಕರು 12 ಮಂದಿಯನ್ನು ಕೊಂದಿದ್ದರು. ಐಸಿಸ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News