ಬ್ರಿಟನ್‌: ಇಂದು ಸಂಸದೀಯ ಚುನಾವಣೆ

Update: 2017-06-07 17:06 GMT

ಲಂಡನ್, ಜೂ. 7: ಬ್ರಿಟನ್ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯಲಿದೆ. ಪ್ರಧಾನಿ ತೆರೇಸಾ ಮೇ ಅವರ ‘ಬ್ರೆಕ್ಸಿಟ್’ ಚುನಾವಣೆ ಎಂಬುದಾಗಿಯೇ ಬಿಂಬಿಸಲ್ಪಟ್ಟಿದ್ದ ಚುನಾವಣೆ ಇತ್ತೀಚಿನ ದಿನಗಳಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ.

ಕನ್ಸರ್ವೇಟಿವ್ ಪಕ್ಷದಿಂದ ಪ್ರಧಾನಿ ತೆರೇಸಾ ಮೇ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದರೆ, ಲೇಬರ್ ಪಕ್ಷದಿಂದ ಜೆರೆಮಿ ಕಾರ್ಬಿನ್ ಅವರಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಬೆನ್ನು ಬೆನ್ನಿಗೆ ನಡೆದ ಭಯೋತ್ಪಾದಕ ದಾಳಿಗಳು ತೆರೇಸಾ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ ಎಂದು ಹೇಳಲಾಗಿದೆ.

ಬ್ರೆಕ್ಸಿಟ್ ಪ್ರಕ್ರಿಯೆಯನ್ನು ತನಗೆ ಬೇಕಾದಂತೆ ಮುಂದುವರಿಸಲು ಜನಾದೇಶ ಕೋರುವುದಕ್ಕಾಗಿ ತೆರೇಸಾ ಎಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News