ಅಖ್ತರ್ ದಾಳಿಯನ್ನು ಎದುರಿಸುವುದು ಕಠಿಣ:ಧೋನಿ

Update: 2017-06-07 17:44 GMT

ಲಂಡನ್, ಜೂ.7: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಖ್ಯಾತ ಬೌಲರ್‌ಗಳ ದಾಳಿಯನ್ನು ಪುಡಿ ಪುಡಿ ಮಾಡಿದ್ದಾರೆ. ಕಳೆದ 13 ವರ್ಷಗಳ ವೃತ್ತಿ ಬದುಕಿನಲ್ಲಿ ವೇಗದ ಬೌಲರ್‌ಗಳಾದ ಬ್ರೆಟ್ ಲೀ, ಗ್ಲೆನ್ ಮೆಕ್‌ಗ್ರಾತ್, ಲಸಿತ್ ಮಾಲಿಂಗ, ಡೇಲ್ ಸ್ಟೇಯ್ನಾ ಮತ್ತಿತರ ಬೌಲರ್‌ಗಳು ಧೋನಿಯ ಬ್ಯಾಟಿಂಗ್ ಮುಂದೆ ಕೈ ಸುಟ್ಟುಕೊಂಡವರು.

 ‘‘ ನಿಯಮಿತ ತಂತ್ರಗಾರಿಕೆಯಲ್ಲಿ ವೇಗದ ಬೌಲರ್‌ಗಳನ್ನು ಎದುರಿಸುವುದು ಯೋಚಿಸಿದಷ್ಟು ಸುಲಭವಲ್ಲ. ನಾನು ನೋಡಿರುವ ವೇಗದ ಬೌಲರ್‌ಗಳ ಪೈಕಿ ಶುಐಬ್ ಅಖ್ತರ್ ಅವರನ್ನು ಎದುರಿಸುವುದು ಕಷ್ಟ ಸಾಧ್ಯ’’ ಎಂದು ಧೋನಿ ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ಚಾರಿಟಿ ಔತಣ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘‘ ನಾನು ಅವರನ್ನು ಗುರುತಿಸಲು ಸಣ್ಣ ಕಾರಣ ಇದೆ. ಯಾಕೆಂದರೆ ಅವರು ವೇಗದ ಮತ್ತು ತ್ವರಿತಗತಿಯ ಬೌಲರ್. ಅವರು ಯಾರ್ಕರ್, ಬೌನ್ಸರ್ ಎಸೆಯ ಬಲ್ಲರು. ಆದರೆ ಅವರು ಅನಿರೀಕ್ಷಿತ ಬೌನ್ಸರ್ ಎಸೆದು ದಾಂಡಿಗರನ್ನು ಕಾಡುತ್ತಾರೆ’’ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.ಧೋನಿ ಪಾಕಿಸ್ತಾನ ವಿರುದ್ಧ 32 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 58.38 ಸರಾಸರಿಯಂತೆ 1,226 ರನ್ ಸಂಪಾದಿಸಿದ್ದಾರೆ.2 ಶತಕ ಮತ್ತು 9 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ಧೋನಿ 2005ರಲ್ಲಿ ಕೊಚ್ಚಿಯಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಿದ್ದರು. 3 ರನ್ ಗಳಿಸಿ ಅರ್ಶದ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದರು.ಆದರೆ ಎರಡನೆ ಪಂದ್ಯದಲ್ಲಿ ಅವರ ಅವತಾರ ಬದಲಾಗಿತ್ತು.ವಿಶಾಖಪಟ್ಟಣದಲ್ಲಿ ಪಾಕಿಸ್ತಾನ ವಿರುದ್ಧ 123 ಎಸೆತಗಳಲ್ಲಿ 356 ರನ್ ಬಾರಿಸಿದ್ದರು.

  2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತ ತಂಡದ ನಾಯಕರಾಗಿದ್ದರು ಧೋನಿ. ಲಂಕಾದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಎರಡನೆ ಪಂದ್ಯದಲ್ಲಿ ಧೋನಿಯ ಭರ್ಜರಿ ಬ್ಯಾಟಿಂಗ್‌ನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News