​ಮಂಗಳೂರು: ಗುದದ್ವಾರದಲ್ಲಿ ಒಂದು ಕೆ.ಜಿ.ಗೂ ಅಧಿಕ ಚಿನ್ನ ಸಾಗಾಟ!

Update: 2017-06-08 06:00 GMT

ಮಂಗಳೂರು, ಜೂ.8: ದುಬೈಯಿಂದ ಅಕ್ರಮವಾಗಿ ಗುದದ್ವಾರದಲ್ಲಿಟ್ಟು ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಹಾರಾಷ್ತ್ರ ಮೂಲದ ದೀಪಕ್ ಇಂದರ್ ದಾಸ್ ಸಿದ್ವಾನಿ ಮತ್ತು ನಿರ್ಮಲ್ ದಾಸ್ ಲಲ್ಲಾನಿ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 1 ಕೆ.ಜಿ. 247 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾಮೂಲಿ ತಪಾಸಣೆಯ ವೇಳೆ ದೀಪಕ್ ಇಂದರ್ ದಾಸ್ ಸಿದ್ವಾನಿ ಮತ್ತು ನಿರ್ಮಲ್ ದಾಸ್ ಲಲ್ಲಾನಿ ಬಗ್ಗೆ ಅನುಮಾನಗೊಂಡು ಇನ್ನಷ್ಟು ತಪಾಸಣೆಗೊಳಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಕಾಂಡೋಮ್‌ಗಳಲ್ಲಿ ಚಿನ್ನವನ್ನು ತುಂಬಿ ಅದನ್ನು ಗುದದ್ವಾರದೊಳಗೆ ತುರುಕಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಭಾರತಕ್ಕೆ ಹೋಲಿಸಿದರೆ ದುಬೈಯಲ್ಲಿ ಚಿನ್ನ ಅಗ್ಗಕ್ಕೆ ದೊರೆಯುವುದರಿಂದ ಇಲ್ಲಿ ತಂದು ಮಾರಾಟ ಮಾಡುವ ಉದ್ದೇಶದಿಂದ ಆರೋಪಿಗಳು ಕಳ್ಳ ಸಾಗಾಟಕ್ಕೆ ಮುಂದಾಗಿದ್ದರು ಎಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News