ಝೆನಿತ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2017-06-08 06:11 GMT

ಮುಡಿಪು, ಜೂ.8: ಇಲ್ಲಿನ ಝೆನಿತ್ ಶಾಲೆಯ ವತಿಯಿಂದ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಝೆನಿತ್ ಎಜುಕೇಶನಲ್ ಮತ್ತು ಚಾರಿಟೇಬಲ್ ಅಧ್ಯಕ್ಷ ಮಜೀದ್ ಎನ್., ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಅತ್ಯಂತ ಮಹತ್ವಾಗಿದೆ. ದೇಶದ ಜವಾಬ್ದಾರಿಯ ಜತೆಗೆ ಪರಿಸರದ ಹೊಣೆಗಾರಿಯನ್ನು ವಿದ್ಯಾರ್ಥಿ ಯುವಜನರು ಸಮರ್ಥವಾಗಿ ನಿರ್ವಹಿಸದಿದ್ದಲ್ಲಿ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಶಾಲಾ ಸಂಚಾಲಕರಾದ ನಹಾದ ಎಂ.,  ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ಬಶೀರ್ ಹಾಗೂ ಹನೀಫ್, ಮುಖ್ಯ ಶಿಕ್ಷಕಿ ಕ್ಯಾಥರಿನ್ ಡಿಸೋಜ, ಸಹಶಿಕ್ಷಕರಾದ ಮುಹಮ್ಮದ್ ಮನಾಝಿರ್ ಎಂ.ಎ. ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News