ಬ್ರಿಟಿಷರ ಕಾಲದಲ್ಲಿ ರೈತರ ಸ್ಥಿತಿ ಉತ್ತಮವಾಗಿತ್ತು: ಬಾಬಾ ರಾಮ್‌ದೇವ್

Update: 2017-06-08 10:51 GMT

 ಪಾಟ್ನ,ಜೂ.8: ಹಲವುರಾಜ್ಯಗಳಲ್ಲಿ ರೈತ ಚಳವಳಿ ನಡೆಯುತ್ತಿವೆ. ಮಧ್ಯಪ್ರದೇಶದ ಮಂದಸಾರ್‌ನಲ್ಲಿ ಹಿಂಸಾತ್ಮಕರೂಪಕ್ಕಿಳಿದಿದೆ. ಬಿಹಾರದ ಮೋತಿಹಾರಿನಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರಕ್ಕೆ ಬಂದ ಯೋಗಗುರುಬಾಬಾ ರಾಮ್‌ದೇವ್ ಬ್ರಿಟಿಷರ ಕಾಲದಲ್ಲಿ ರೈತರ ಪರಿಸ್ಥಿತಿ ಉತ್ತಮವಾಗಿತ್ತು. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮಂದಸಾರಕ್ಕೆ ಭೇಟಿ ನೀಡಿದ್ದನ್ನು ಉದ್ಧರಿಸಿದ ರಾಮ್ ದೇವ್, ರೈತ ಚಳವಳಿಯ ಬೆಂಕಿಗೆ ತುಪ್ಪ ಸುರಿಯುವ ರಾಜಕೀಯ ನಡೆಸಬಾರದೆಂದು ಅಭಿಪ್ರಾಯಿಸಿದ್ದಾರೆ.

ಮೋದಿ ಸರಕಾರ ರೈತರಿಗಾಗಿ ಹಲವು ನೀತಿಗಳನ್ನು ರೂಪಿಸಿದೆ. ಈಗ ಈ ನೀತಿ ತಳಮಟ್ಟದಿಂದ ಕಾರ್ಯರೂಪಕ್ಕಿಳಿಸುವ ಅಗತ್ಯವಿದೆ. ರೈತ ಆಯೋಗ ಮಾಡಿ ರೈತರ ಹಿತಕ್ಕಾಗಿ ಕೆಲಸಮಾಡಬೇಕು ಎಂದು ಅವರು ಹೇಳಿದರು.

    ರೈತರ ಹೆಸರಿನಲ್ಲಿ ನಿರಂತರ ರಾಜಕೀಯ ನಡೆಯುತ್ತಿದೆ. ಎಲ್ಲಿಯೂ ರೈತ ಸಂತೃಪ್ತನಾಗಿಲ್ಲ. ಆದರೆ,ದೇಶದ ಅನ್ನದಾತನ ಹೆಸರಿನಲ್ಲಿ ರಾಜಕೀಯ ನಡೆಯಬಾರದು ಎಂದು ರಾಮ್ ದೇವ್ ಹೇಳಿದರು. ದೇಶದ ವಿವಿಧೆಡೆ ಕೆಲವುದಿನಗಳಿಂದ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಮೂವರು ರೈತರು ಮಹಾರಾಷ್ಟ್ರದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಐವರು ರೈತರು ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಉದ್ವಿಗ್ನ ಸ್ಥಿತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News