×
Ad

ತೆರಿಗೆ ವಂಚನೆ ತಡೆ ಕಾನೂನಿಗೆ ಭಾರತ, 67 ದೇಶಗಳು ಸಹಿ

Update: 2017-06-08 19:58 IST

ಪ್ಯಾರಿಸ್, ಜೂ. 8: ತಮ್ಮ ವ್ಯವಹಾರದ ಸ್ಥಳವನ್ನು ಕೃತಕವಾಗಿ ಬದಲಾಯಿಸುವ ಮೂಲಕ ತೆರಿಗೆ ವಂಚಿಸಲು ಕಂಪೆನಿಗಳಿಗೆ ಅವಕಾಶ ನೀಡುತ್ತಿದ್ದ ಕಾನೂನು ಲೋಪದೋಷಗಳನ್ನು ಸರಿಪಡಿಸುವ ಒಪ್ಪಂದವೊಂದಕ್ಕೆ ಭಾರತ ಮತ್ತು 67 ದೇಶಗಳು ಸಹಿ ಹಾಕಿವೆ.

ಲಾಭ ವರ್ಗಾವಣೆಯ ಸಮಸ್ಯೆಯನ್ನು ನಿಭಾಯಿಸುವ ಬಹುಪಕ್ಷೀಯ ಒಪ್ಪಂದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಸಹಿ ಹಾಕಿದರು.

ತೆರಿಗೆ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪೆನಿಗಳು ಲಾಭ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದವು.

ಭಾರತದಲ್ಲಿ ವ್ಯವಹಾರ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ಕೃತಕವಾಗಿ ತಮ್ಮ ವ್ಯಾಪಾರ ಸ್ಥಳವನ್ನು ಬದಲಿಸಿ ತೆರಿಗೆ ತಪ್ಪಿಸಲು ಇನ್ನು ಅವಕಾಶವಿಲ್ಲ ಎಂದು ಪರಿಣತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News