ಸೊಮಾಲಿಯ: ಉಗ್ರ ದಾಳಿ; 70 ಬಲಿ
Update: 2017-06-08 20:48 IST
ಮೊಗಾದಿಶು (ಸೊಮಾಲಿಯ), ಜೂ. 8: ಭಾರೀ ಶಸ್ತ್ರಸಜ್ಜಿತ ಅಲ್-ಶಬಾಬ್ ಉಗ್ರರು ಸೊಮಾಲಿಯದ ಪುಂಟ್‌ಲ್ಯಾಂಡ್ ರಾಜ್ಯದಲ್ಲಿರುವ ಸೇನಾ ನೆಲೆಯೊಂದರ ಮೇಲೆ ದಾಳಿ ನಡೆಸಿ ಸುಮಾರು 70 ಮಂದಿಯನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
ಇದು ಹಲವು ವರ್ಷಗಳ ಬಳಿಕ ದೇಶದಲ್ಲಿ ನಡೆದ ಭೀಕರ ದಾಳಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.
ವಾಣಿಜ್ಯ ನಗರ ಬೊಸಾಸೊಗೆ ಸಮೀಪದ ಅಫ್-ಉರುರ್ ಸೇನಾ ಶಿಬಿರದಲ್ಲಿ ಸ್ಫೋಟ ನಡೆಸುವ ಮೂಲಕ ಭಯೋತ್ಪಾದಕರು ತಮ್ಮ ದಾಳಿ ಆರಂಭಿಸಿದರು. ಬಳಿಕ ನೆಲೆಯ ಒಳಗೆ ನುಗ್ಗಿದ ಭಯೋತ್ಪಾದಕರು ಸನಿಹದಿಂದ ಸೈನಿಕರನ್ನು ಕೊಂದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದರು.
ಭಯೋತ್ಪಾದಕರು ಮಹಿಳೆಯರು ಸೇರಿದಂತೆ ಹಲವು ನಾಗರಿಕರ ಶಿರ ಕಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.